ಪ್ರತಿಯೊಬ್ಬರೂ ಬೆಳಗ್ಗೆ ಎದ್ದಕೂಡಲೇ ಚಹಾ ಅಥವಾ ಕಾಫಿ ಕುಡಿಯುವುದನ್ನು ರೂಢಿಸಿಕೊಂಡಿರುತ್ತಾರೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ-ಕಾಫಿ ಕುಡಿಯುವುದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ.
ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಚಹಾ-ಕಾಫಿ ಕುಡಿಯುವುದರಿಂದ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತವೆ.
ಚಹಾ ಮತ್ತು ಕಾಫಿಯಲ್ಲಿ ಹೆಚ್ಚಾಗಿರುವ ಟ್ಯಾನಿನ್ ಎಂಬ ಅಂಶದಲ್ಲಿ ರಾಸಾಯನಿಕಗಳಿದ್ದು, ನಿತ್ಯ ಸೇವನೆಯಿಂದ ಹಲ್ಲುಗಳ ಬಣ್ಣ ಬದಲಾಗುತ್ತದೆ.
ಸಕ್ಕರೆ ಬೆರೆಸಿದ ಚಹಾ ಮತ್ತು ಕಾಫಿ ಸೇವನೆಯು ನಿಮಗೆ ಬಾಯಾರಿಕೆಯಾಗದಂತೆ ಮಾಡುತ್ತವೆ. ಇದರಿಂದ ದೇಹ ಡಿಹೈಡ್ರೇಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಚಹಾ ಅಥವಾ ಕಾಫಿ ಗ್ಯಾಸ್ಟ್ರಿಕ್ ಸಮಸ್ಯೆ ಉಲ್ಬಣಗೊಳ್ಳುವಂತೆ ಮಾಡುತ್ತದೆ.
ಚಹಾ-ಕಾಫಿ ಸೇವನೆಯಿಂದ ಹೊಟ್ಟೆಯುರಿ ಮತ್ತು ಫುಡ್ ಪಾಯನ್ಸ್ ರೀತಿಯ ಸಮಸ್ಯೆಗಳು ಉಂಟಾಗುತ್ತದೆ.
ಅತಿಯಾಗಿ ಚಹಾ-ಕಾಫಿ ಸೇವನೆಯಿಂದ ಮಲಬದ್ಧತೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.