ಪ್ಯಾಶನ್ ಫ್ರೂಟ್ ಅನ್ನು ಶರಬತ್ ಹಣ್ಣು ಎಂತಲೂ ಕರೆಯಲಾಗುತ್ತದೆ.
ಪ್ಯಾಶನ್ ಫ್ರೂಟ್ ಗಸಗಸೆ ರೀತಿಯ ಬೀಜಗಳನ್ನು ಹೊಂದಿದ್ದು, ನಿಂಬೆ ಹಣ್ಣಿನ ಬಣ್ಣ ಮತ್ತು ಹುಳಿ ರುಚಿ ಹೊಂದಿರುತ್ತದೆ.
ಪ್ಯಾಶನ್ ಫ್ರೂಟ್‌ನಲ್ಲಿರುವ ಸಮೃದ್ಧ ಪೋಷಕಾಂಶಗಳು ನಿಮ್ಮ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪ್ಯಾಶನ್ ಫ್ರೂಟ್‌ನಲ್ಲಿ ವಿಟಮಿನ್ A, C, ಕೆರೋಟಿನ್, ಪೊಟಾಷಿಯಮ್, ಫೈಬರ್ ಹಾಗೂ ಕಬ್ಬಿಣಾಂಶ ಅಧಿಕ ಪ್ರಮಾಣದಲ್ಲಿವೆ.
ಡೆಂಗಿ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಪ್ಲೇಟ್ಲೆಟ್ ಹೆಚ್ಚಿಸಲು ಪ್ಯಾಶನ್ ಫ್ರೂಟ್ ಸರಳ ಮನೆಮದ್ದು.
ವಿಟಮಿನ್ C ಸಮೃದ್ಧವಾಗಿರುವ ಪ್ಯಾಶನ್ ಫ್ರೂಟ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪ್ಯಾಶನ್ ಫ್ರೂಟ್‌ನಲ್ಲಿರುವ ಫೈಬರ್ ಅಂಶವು ನಿಮ್ಮ ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.
ಪ್ಯಾಶನ್ ಫ್ರೂಟ್ ಜ್ಯೂಸ್ ಸೇವನೆಯು ರಕ್ತದೊತ್ತಡ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.