ರೇಬೀಸ್ ಎಂಬುದು ರೇಬೀಸ್ ಎಂಬ ವೈರಸ್ನಿಂದ ಹರಡುವ ರೋಗ. ಇದು ವಿಶೇಷವಾಗಿ ಪ್ರಾಣಿಗಳ ರೋಗ.
ಪ್ರಾಣಿಗೆ ಈ ರೋಗ ಬಂದು ಅದು ಮನುಷ್ಯನಿಗೆ ಕಚ್ಚಿದರೆ ಆ ವ್ಯಕ್ತಿಗೂ ಈ ರೋಗ ಹರಡುತ್ತದೆ. ಸೋಂಕಿತ ಪ್ರಾಣಿಗಳ ಲಾಲಾರಸದಲ್ಲಿ ಈ ವೈರಸ್ ಇರುತ್ತದೆ.
ರೇಬೀಸ್ ರೋಗವು ನಿಮ್ಮ ಕೇಂದ್ರ ನರಮಂಡಲಕ್ಕೆ ಹಾನಿ ಮಾಡುತ್ತದೆ. ನಿಮ್ಮಲ್ಲಿ ಜ್ವರದ ರೀತಿಯ ರೋಗಲಕ್ಷಣ ಕಾಣಿಸಿಕೊಳ್ಳುತ್ತದೆ.
ರೇಬೀಸ್ ರೋಗ ಬಂದ ವ್ಯಕ್ತಿಗೆ ತುಂಬಾ ಜ್ವರ ಮತ್ತು ಆಯಾಸ ಉಂಟಾಗುತ್ತದೆ.
ಗಾಯದ ಸ್ಥಳದಲ್ಲಿ ತುರಿಕೆ ಮತ್ತು ಮರಗಟ್ಟುವಿಕೆ ಭಾವನೆ ಇರುತ್ತದೆ.
ತೀವ್ರ ಕೆಮ್ಮು ಮತ್ತು ಗಂಟಲು ಕೆರತ ಉಂಟಾಗುತ್ತದೆ.
ಸ್ನಾಯು ನೋವು, ವಾಕರಿಕೆ ಮತ್ತು ವಾಂತಿ ಹಾಗೂ ಅತಿಸಾರ ಉಂಟಾಗುತ್ತದೆ.
ಆಕ್ರಮಣಶೀಲತೆ, ಭಯ ಮತ್ತು ಭ್ರಮೆ ಉಂಟಾಗುತ್ತದೆ.