ಅಗತ್ಯ ಪೋಷಕಾಂಶ

ಮನುಷ್ಯ ದೇಹಕ್ಕೆ ಅಗತ್ಯ ಪೋಷಕಾಂಶಗಳಲ್ಲಿ ವಿಟಮಿನ್‌ B12 ಕೂಡ ಒಂದು.

Puttaraj K Alur
Jan 05,2025

ನಿರ್ಲಕ್ಷ್ಯ ಮಾಡಬಾರದು

ವಿಟಮಿನ್‌ B12 ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು.

ವಿಟಮಿನ್‌ B12 ಕೊರತೆ

ನಿಮ್ಮ ಕೈ-ಕಾಲುಗಳಲ್ಲಿ ಈ ಐದು ಲಕ್ಷಣಗಳು ಗೋಚರಿಸಿದರೆ ವಿಟಮಿನ್‌ B12 ಕೊರತೆ ಇರಬಹುದು ಎಂದರ್ಥ .

ಮರಗಟ್ಟುವಿಕೆ

ವಿಟಮಿನ್‌ B12 ಕೊರತೆಯು ಕಾಲು & ಕೈಗಳಲ್ಲಿ ಮರಗಟ್ಟುವಿಕೆಗೆ ಕಾರಣವಾಗಬಹುದು. ಈ ವಿಟಮಿನ್‌ ಕೊರತೆಯು ನರಗಳ ಸುತ್ತಲಿನ ರಕ್ಷಣಾತ್ಮಕ ಕವಚವನ್ನು ಹಾನಿಗೊಳಿಸುತ್ತದೆ.

ನರಮಂಡಲಕ್ಕೆ ಹಾನಿ

ವಿಟಮಿನ್‌ B12 ಕೊರತೆಯು ನಿಮ್ಮ ನರಮಂಡಲವನ್ನು ಹಾನಿಗೊಳಿಸುತ್ತದೆ.

ಕೈ-ಕಾಲುಗಳಲ್ಲಿ ಮರಗಟ್ಟುವಿಕೆ

ಆಗಾಗ ಕೈ-ಕಾಲುಗಳು ಮತ್ತು ತೋಳುಗಳಲ್ಲಿ ಮರಗಟ್ಟುವಿಕೆ ಅನುಭವಿಸಿದರೆ ಅದು ವಿಟಮಿನ್‌ B12 ಕೊರತೆ ಇರಬಹುದು.

ಕೆಂಪು ರಕ್ತ ಕಣ

ವಿಟಮಿನ್‌ B12 ಮತ್ತು ಕೆಂಪು ರಕ್ತ ಕಣಗಳ ಕೊರತೆಯು ಚರ್ಮದ ಬಣ್ಣ ಬದಲಾಗಲು ಕಾರಣವಾಗುತ್ತದೆ.

ನಿರಂತರ ದಣಿವು

ನೀವು ನಿರಂತರವಾಗಿ ದಣಿದಿದ್ದರೆ ಅದು ವಿಟಮಿನ್‌ B12 ಕೊರತೆಯಾಗಿದೆ ಎಂದರ್ಥ. ಇದು ಅನೇಕ ಜನರಲ್ಲಿ ಸಾಮಾನ್ಯ ಲಕ್ಷಣವಾಗಿರುತ್ತದೆ.

VIEW ALL

Read Next Story