ಆರೋಗ್ಯವೇ ಭಾಗ್ಯ. ಉತ್ತಮ ಆರೋಗ್ಯಕ್ಕಾಗಿ ನಾವು ನಮ್ಮ ಜೀವನಶೈಲಿಯಲ್ಲಿ ಸುಧಾರಣೆ ತರುವುದು ತುಂಬಾ ಮುಖ್ಯ. ಅದರಲ್ಲೂ 30ವರ್ಷ ತುಂಬಿದ ಮೇಲೆ ಕೆಲವು ಆಹಾರಗಳಿಂದ ಅಂತರ ಕಾಯ್ದುಕೊಳ್ಳುವುದರಿಂದ ಅತ್ಯಗತ್ಯ. ಅಂತಹ ಆಹಾರಗಳೆಂದರೆ...

Yashaswini V
Jun 27,2023

ಅಧಿಕ ಸೋಡಿಯಂ ಆಹಾರ

ಅಧಿಕ ಸೋಡಿಯಂ ಆಹಾರ ಸೇವನೆಯು ಹೈ ಬಿಪಿ ಜೊತೆಗೆ ಹೃದ್ರೋಗದ ಅಪಾಯವನ್ನೂ ಹೆಚ್ಚಿಸಬಹುದು. ಹಾಗಾಗಿ 30ರ ಬಳಿಕ ಸೋಡಿಯಂಯುಕ್ತ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ.

ಕರಿದ ಆಹಾರಗಳು

ಕರಿದ ಆಹಾರಗಳು ತಿನ್ನಲು ಬಲು ರುಚಿ. ಆದರೆ, ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಹಾಗಾಗಿ, 30ರ ಬಳಿಕ ಇಂತಹ ಆಹಾರಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.

ಸಂಸ್ಕರಿಸಿದ ಆಹಾರಗಳು

ಈ ಬದಲಾದ ಜೀವನಶೈಲಿಯಲ್ಲಿ ಬಹುತೇಕ ಮಂದಿ ರೆಡಿ ಟು ಈಟ್ ಆಹಾರವನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಇದು ನಿಮ್ಮನ್ನು ಗಂಭೀರ ಕಾಯಿಲೆಗಳ ಅಪಾಯಕ್ಕೆ ದೂಡಬಹುದು.

ತಂಪು ಪಾನೀಯಗಳು

ಹೆಚ್ಚು ಬೇಸಿಗೆ ಸಮಯದಲ್ಲಿ ಇಲ್ಲವೇ ಮಧ್ಯಾಹ್ನದ ವೇಳೆ ಜನರು ತಂಪು ಪಾನೀಯಗಳನ್ನು ಸೇವಿಸಲು ಇಷ್ಟ ಪಡುತ್ತಾರೆ. ಆದರೆ, ಇದೂ ಕೂಡ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಆಲ್ಕೋಹಾಲ್

ಮದ್ಯ ಸೇವನೆಯು ನಿಮ್ಮ ಯಕೃತ್ತಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ, ಮದ್ಯ ಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ, 30 ದಾಟಿದ ಬಳಿಕವಂತು ಇದರಿಂದ ದೂರ ಉಳಿಯುವುದೇ ಒಳಿತು.

ಅಧಿಕ ಕೊಬ್ಬಿನ ಡೈರಿ ಉತ್ಪನ್ನಗಳು

ಚೀಸ್, ಕ್ರೀಂನಂತಹ ಅಧಿಕ ಕೊಬ್ಬಿನ ಡೈರಿ ಉತ್ಪನ್ನಗಳ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತದೆ.

ರೆಡ್ ಮೀಟ್

ಮಾಂಸಾಹಾರ ಆರೋಗ್ಯಕ್ಕೆ ಉತ್ತಮವಾದರೂ, ಸಂಸ್ಕರಿಸಿದ ಮಾಂಸ, ಇಲ್ಲವೇ ಕೆಂಪು ಮಾಂಸ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

ಸಿಹಿ

ವಯಸ್ಸಾದಂತೆ ಸಿಹಿ ಸೇವನೆಯನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ, ಇದು ಸಹ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಿಸುವಂತೆ ಮಾಡಬಹುದು.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

VIEW ALL

Read Next Story