ಮಹಿಳೆಯರಲ್ಲಿ ಹೃದಯಾಘಾತದ ಸಾಮಾನ್ಯ ಲಕ್ಷಣಗಳು, ನಿರ್ಲಕ್ಷಿಸಿದರೆ ಅಪಾಯ ಖಂಡಿತ!

Published by: Yashaswini V | Sep 02, 2025

ಹೃದಯಾಘಾತ

ಹೃದಯಾಘಾತ ಪುರುಷರಲ್ಲಿ ಹೆಚ್ಚು ಸಂಭವಿಸುತ್ತದೆ. ಹಾಗಂದ ಮಾತ್ರಕ್ಕೆ ಮಹಿಳೆಯರಿಗೆ ಹಾರ್ಟ್ ಅಟ್ಯಾಕ್ ಆಗುವುದೇ ಇಲ್ಲ ಎಂದು ಅರ್ಥವಲ್ಲ.

Published by: Yashaswini V | Sep 02, 2025

ಹಾರ್ಟ್ ಅಟ್ಯಾಕ್

ಪುರುಷರು ಮತ್ತು ಮಹಿಳೆಯರಲ್ಲಿ ಹಾರ್ಟ್ ಅಟ್ಯಾಕ್ ಲಕ್ಷಣಗಳು ಸಾಮಾನ್ಯವಾಗಿ ಒಂದೇ ಆಗಿದ್ದರೂ ಸಹ ರೋಗನಿರ್ಣಯದಲ್ಲಿನ ವಿಳಂಬತೆಯಿಂದಾಗಿ ಹೃದಯಾಘಾತವು ಹೆಚ್ಚು ಮಾರಕ ಎಂದು ಸಾಬೀತುಪಡಿಸಬಹುದು ಎನ್ನಲಾಗುತ್ತದೆ. ಮಹಿಳೆಯರಲ್ಲಿ ಕಂಡು ಬರುವ ಹೃದಯಾಘಾತದ ಸಾಮಾಞ ಲಕ್ಷಣಗಳೆಂದರೆ...

Published by: Yashaswini V | Sep 02, 2025

ಭುಜ, ತೋಳುಗಳಲ್ಲಿ ನೋವು

ಭುಜಗಳಲ್ಲಿ ಮತ್ತು ತೋಳುಗಳಲ್ಲಿ ಕಂಡು ಬರುವ ನೋವನ್ನು ಮಹಿಳೆಯರು ಗ್ಯಾಸ್ಟ್ರಿಕ್ ಅಥವಾ ಕೆಲಸ ಹೆಚ್ಚಾಗಿರಬಹುದೆಂದು ನಿರ್ಲಕ್ಷಿಸುತ್ತಾರೆ. ಆದರಿದು ಹಾರ್ಟ್ ಅಟ್ಯಾಕ್ ನ ಎಚ್ಚರಿಕೆಯ ಗಂಟೆಯೂ ಆಗಿರಬಹುದು.

Published by: Yashaswini V | Sep 02, 2025

ತಲೆಸುತ್ತು

ಒತ್ತಡಭರಿತ ಜೀವನ ಶೈಲಿಯಲ್ಲಿ ನಿದ್ರೆಯ ಅಭಾವದಿಂದ ತಲೆಸುತ್ತು ಬರಬಹುದು. ಆದರೆ, ಪದೇ ಪದೇ ಈ ಲಕ್ಷಣ ಕಂಡು ಬರುತ್ತಿದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.

Published by: Yashaswini V | Sep 02, 2025

ಬೆನ್ನು ನೋವು

ದೀರ್ಘ ಸಮಯ ಕುಳಿತುಕೊಳ್ಳುವುದರಿಂದ ಬೆನ್ನು ನೋವಿನ ಸಮಸ್ಯೆ ಸಾಮಾನ್ಯ. ಆದರೆ, ಇದನ್ನು ನಿರ್ಲಕ್ಷಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಅಪಾಯವೂ ಹೆಚ್ಚಾಗಬಹುದು.

Published by: Yashaswini V | Sep 02, 2025

ಉಸಿರಾಟದ ತೊಂದರೆ

ವಾತಾವರಣ ಬದಲಾದಾಗ, ಶೀತವಿದ್ದಾಗ ಉಸಿರಾಟದ ಸಮಸ್ಯೆ ಉಂಟಾಗುವುದು ಸಾಮಾನ್ಯವೇ. ಆದರೂ, ಆಗಾಗ್ಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.

Published by: Yashaswini V | Sep 02, 2025

ಬೆವರುವುದು

ಮಹಿಳೆಯರು ಸಾಮಾನ್ಯವಾಗಿ ಬೆವರುವುದನ್ನು ನಿರ್ಲಕ್ಷಿಸುತ್ತಾರೆ. ಆದರೆ, ಸದಾ ಅತಿಯಾಗಿ ಬೆವರುವುದು ನಿಮ್ಮ ಆರೋಗ್ಯ ಸರಿಯಿಲ್ಲ ಎಂಬುದರ ಸಂಕೇತವಾಗಿದೆ. ಇದು ಹೃದಯದ ಕಾಯಿಲೆಯ ಲಕ್ಷಣವೂ ಆಗಿರಬಹುದು.

Published by: Yashaswini V | Sep 02, 2025

ಆಯಾಸ

ಆಯಾಸಕ್ಕೆ ಹಲವು ಕಾರಣಗಳಿರಬಹುದು. ಆದರೆ, ಮಹಿಳೆಯರೇ ಪದೇ ಪದೇ ಸಣ್ಣ ಪುಟ್ಟ ಕೆಲಸ ಮಾಡಿದರೆ, ಇಲ್ಲವೇ ಸುಮ್ಮನಿರುವಾಗಲೂ ಆಯಾಸದಿಂದ ಬಳಲುತ್ತಿದ್ದರೆ ಇದು ಹೃದಯಾಘಾತದ ಅಪಾಯವನ್ನು ಸಹ ಸೂಚಿಸುತ್ತದೆ. ಇಂತಹ ಸಂದರ್ಭದಲ್ಲಿ ಮೊದಲು ವೈದ್ಯರನ್ನು ಸಂಪರ್ಕಿಸಿ.

Published by: Yashaswini V | Sep 02, 2025

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Sep 02, 2025

VIEW ALL

Read Next Story