ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ, ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ಹೃದಯವು ಬಲವಾಗಿರುತ್ತದೆ.
ಹೃದಯ ಕಾಯಿಲೆಗಳಿಗೆ ಹಲವು ಕಾರಣಗಳಿವೆ. ಜೀವನಶೈಲಿ, ಒತ್ತಡ ಮತ್ತು ಅನಾರೋಗ್ಯಕರ ಅಭ್ಯಾಸಗಳು ಹೃದಯದ ಸಮಸ್ಯೆಗಳನ್ನು ಹೆಚ್ಚಿಸುತ್ತವೆ.
ಆರೋಗ್ಯಕರವಾಗಿರಲು ಆಹಾರಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ. ಸಮತೋಲಿತ ಆಹಾರವು ಹೃದ್ರೋಗವನ್ನು ತಡೆಯುತ್ತದೆ.
ವಿವಿಧ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್ಗಳು ಆರೋಗ್ಯಕ್ಕೆ ಒಳ್ಳೆಯದು ಅವುಗಳನ್ನು ತಪ್ಪದೇ ಸೇವಿಸಿ.
ಮೀನು, ಅಗಸೆಬೀಜ ಮತ್ತು ವಾಲ್ ನಟ್ ನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮರೆಯದೇ ತಿನ್ನಿ.
ದೈಹಿಕ ಚಟುವಟಿಕೆಯ ಕೊರತೆಯು ಹೃದಯ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ನಿಯಮಿತವಾಗಿ ವ್ಯಾಯಾಮ ಮಾಡಿ.
ಅಧಿಕ ತೂಕವು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ತೂಕವನ್ನು ನಿಯಂತ್ರಿಸಬೇಕು.
ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳು ಒತ್ತಡದಿಂದ ಉಂಟಾಗುತ್ತವೆ. ಒತ್ತಡ ಕಡಿಮೆ ಮಾಡಿಕೊಳ್ಳಿ. ಆವಾಗ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ, ಹೃದಯ ಬಲವಾಗುತ್ತದೆ.
ಧೂಮಪಾನವನ್ನು ತ್ಯಜಿಸುವುದು ಆರೋಗ್ಯಕ್ಕೆ ಒಳ್ಳೆಯದು. ಸಣ್ಣ ಪ್ರಮಾಣದ ಆಲ್ಕೋಹಾಲ್ ಸೇವನತೆ ಉತ್ತಮ. ಮಿತಿಮೀರಿದರೆ ಹೃದಯಕ್ಕೆ ಕುತ್ತು.