ಉತ್ತಮ ಆರೋಗ್ಯಕ್ಕಾಗಿ ಚಳಿಗಾಲದಲ್ಲಿ ತಪ್ಪಿಸಲೇಬೇಕಾದ 10 ಆಹಾರಗಳಿವು

ಸಿಹಿ ತಿನಿಸುಗಳು

ಚಳಿಗಾಲದಲ್ಲಿ ಬೇಕರಿ ತಿನಿಸುಗಳು ಸೇರಿದಂತೆ ಹೆಚ್ಚಿನ ಸಿಹಿ ತಿನಿಸುಗಳ ಸೇವನೆಯು ಅನಾರೋಗ್ಯ ಸಮಸ್ಯೆಯನ್ನು ಉಲ್ಬಣಿಸಬಹುದು.

ಕರಿದ ಆಹಾರಗಳು

ಚುಮು ಚುಮು ಚಳಿಯಲ್ಲಿ ಕರಿದ ಆಹಾರಗಳ ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಆದರೆ, ಎಣ್ಣೆಯಲ್ಲಿ ಕರಿದ ಆಹಾರಗಳಲ್ಲಿ ಕೊಬ್ಬಿನಾಂಶ ಹೆಚ್ಚಿರುವುದರಿಂದ ಇದು ಅನಾರೋಗ್ಯಕ್ಕೆ ಕಾರಣವಾಗಬಹುದು.

ಚಹಾ/ಕಾಫಿ

ಚಳಿಯಲ್ಲಿ ಟೀ ಅಥವಾ ಕಾಫಿ ಬೇಕೆನಿಸುವುದು ಸಾಮಾನ್ಯ. ಆದರೇವು ಹೆಚ್ಚಿನ ಮೂತ್ರವರ್ಧಕ ಪರಿಣಾಮವನ್ನು ಹೊಂದಿರುತ್ತವೆ. ಇದರಿಂದಾಗಿ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಚಳಿಗಾಲದಲ್ಲಿ ಅತಿಯಾದ ಟೀ/ಕಾಫಿ ಸೇವನೆ ತಪ್ಪಿಸಿ.

ಡೈರಿ ಉತ್ಪನ್ನಗಳು

ಚೀಸ್, ಮೊಸರು, ಸೇರಿದಂತೆ ಹಲವು ಡೈರಿ ಉತ್ಪನ್ನಗಳನ್ನು ಚಳಿಗಾಲದಲ್ಲಿ ಆರೋಗ್ಯಕರ ಆಹಾರಗಳು ಎಂದು ಪರಿಗಣಿಸಲಾಗುವುದಿಲ್ಲ. ಇದಕ್ಕೆ ಮುಖ್ಯಾಕಾರಣ ಇವು ದೇಹದಲ್ಲಿ ಲೋಳೆಯ ದಪ್ಪವಾಗಿಸುವ ಪ್ರವೃತ್ತಿಯನ್ನು ಹೊಂದಿರುತ್ತವೆ.

ಹಸಿ ತರಕಾರಿಗಳು

ಹಸಿ ತರಕಾರಿ ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ಚಳಿಗಾಲದಲ್ಲಿ ತರಕಾರಿಗಳನ್ನು ಹಸಿ ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ದೇಹವು ಅದನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಶಕ್ತಿ ಬೇಕಾಗುತ್ತದೆ.

ತಂಪು ಪಾನೀಯಗಳು

ಚಳಿಗಾಲದಲ್ಲಿ ರೆಫ್ರಿಜರೇಟರ್‌ನಲ್ಲಿಟ್ಟ ಯಾವುದೇ ಆಹಾರವನ್ನು ತೆಗೆದ ಕೂಡಲೇ ತಿನ್ನಬಾರದು. ಮಾತ್ರವಲ್ಲ ಚಳಿಗಾಲದಲ್ಲಿ ಸಕ್ಕರೆಯಿರುವ ಪಾನೀಯಗಳನ್ನು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು.

ಬೇಸಿಗೆ ಹಣ್ಣುಗಳು

ಚಳಿಗಾಲದಲ್ಲಿ ಸ್ಟ್ರಾಬೆರಿ, ಕಲ್ಲಂಗಡಿಯಂತಹ ಬೇಸಿಗೆ ಹಣ್ಣುಗಳನ್ನು ತಪ್ಪಿಸಲು ಪ್ರಯತ್ನಿಸಿ.

ಸಂರಕ್ಷಿತ ಆಹಾರಗಳು

ಚಳಿಗಾಲದಲ್ಲಿ ಸಂರಕ್ಷಿತ ಆಹಾರ ಪದಾರ್ಥಗಳ ಬಳಕೆಯನ್ನು ತಪ್ಪಿಸಬೇಕು. ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಪ್ರಕ್ರಿಯೆಯು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನಾಶಪಡಿಸುತ್ತದೆ. ಇದು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಮಾಂಸಾಹಾರ

ಮಾಂಸಾಹಾರವು ಭಾರವಾದ ಆಹಾರವಾಗಿರುವುದರಿಂದ ಚಳಿಗಾಲದಲ್ಲಿ ಇದನ್ನು ಜೀರ್ಣಿಸಿಕೊಳ್ಳಲು ದೇಹವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸಲು ಚಳಿಗಾಲದಲ್ಲಿ ಮಾಂಸಾಹಾರ ಸೇವನೆಯನ್ನು ತಪ್ಪಿಸಿದರೆ ಒಳಿತು.

ಮೊಳಕೆ ಕಾಳುಗಳು

ಚಳಿಗಾಲದಲ್ಲಿ ಮೊಳಕೆ ಕಾಳುಗಳು ಬ್ಯಾಕ್ಟೀರಿಯಾವನ್ನು ಆಶ್ರಯಿಸಬಹುದು. ಹಾಗಾಗಿ, ಅನಾರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಚಳಿಗಾಲದಲ್ಲಿ ಮೊಳಕೆ ಕಾಳುಗಳನ್ನು ತಿನ್ನದೇ ಇರುವುದು ಉತ್ತಮ ಎನ್ನಲಾಗುತ್ತದೆ.

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story