ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಯನ್ನು ತಡೆಯುವ 10 ಸೂಪರ್‌ಫುಡ್‌ಗಳಿವು

Published by: Yashaswini V | Nov 08, 2023

ಬೀಟ್ರೂಟ್

ಬೀಟ್ರೂಟ್ನಲ್ಲಿ ಬೀಟಾಲೈನ್‌ಗಳು ಕಂಡು ಬರುತ್ತದೆ. ಇದು ದೇಹದಲ್ಲಿ ಉರಿಯೂತ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ ಎಂದು ಸಂಶೋಧನೆಯೊಂದು ಕಂಡು ಹಿಡಿದಿದೆ.

Published by: Yashaswini V | Nov 08, 2023

ಕಪ್ಪು ದ್ರಾಕ್ಷಿ

ಕ್ಯಾನ್ಸರ್ ನಿಂದ ರಕ್ಷಣೆ ಪಡೆಯಲು ನೀವು ಬಯಸಿದರೆ ಕಪ್ಪು ದ್ರಾಕ್ಷಿಯನ್ನು ನಿಮ್ಮ ಆಹಾರದ ಭಾಗವಾಗಿಸಿ.

Published by: Yashaswini V | Nov 08, 2023

ಅರಿಶಿನ

ಅರಿಶಿನದಲ್ಲಿ ವಿಟಮಿನ್, ಕಬ್ಬಿಣ, ಕ್ಯಾಲ್ಸಿಯಂ, ಬ್ಯಾಕ್ಟೀರಿಯಾ ವಿರೋಧಿ, ವೈರಸ್ ವಿರೋಧಿ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ.

Published by: Yashaswini V | Nov 08, 2023

ಸಾಲ್ಮನ್ ಫಿಶ್

ಸಾಲ್ಮನ್, ಟ್ಯೂನ ಮತ್ತು ಹೆರಿಂಗ್ ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಅಧಿಕವಾಗಿದೆ. ಇದು ಒಂದು ರೀತಿಯ ಕೊಬ್ಬಿನಾಮ್ಲವಾಗಿದ್ದು, ಇದು ಪ್ರಾಸ್ಟೇಟ್ ಕ್ಯಾನ್ಸರ್ನ ಅಪಾಯವನ್ನು ಕಡಿಮೆ ಮಾಡುತ್ತದೆ.

Published by: Yashaswini V | Nov 08, 2023

ಕೋಸು

ಕೋಸುಗಡ್ಡೆಯಲ್ಲಿ ವಿಟಮಿನ್ ಗಳು, ಕ್ಯಾಲ್ಸಿಯಂ, ಕಬ್ಬಿಣಾಂಶ, ನಾರಿನಂಶ, ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಸ್ ಗುಣಗಳಿವೆ. ಇದರ ಸೇವನೆಯು ಸ್ತನ, ಮೂತ್ರಕೋಶ, ಪ್ರಾಸ್ಟೇಟ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅನ್ನು ತಡೆಯುತ್ತದೆ.

Published by: Yashaswini V | Nov 08, 2023

ಈರುಳ್ಳಿ

ಈರುಳ್ಳಿ ನೈಟ್ರೊಸಮೈನ್‌ಗಳ ರಚನೆಯನ್ನು ತಡೆಯುತ್ತದೆ ಎಂದು ಕಂಡುಹಿಡಿದಿದೆ. ಇವುಗಳು ಕ್ಯಾನ್ಸರ್-ಉಂಟುಮಾಡುವ ಅಂಶಗಳಾಗಿವೆ.

Published by: Yashaswini V | Nov 08, 2023

ದಾಳಿಂಬೆ

ದಾಳಿಂಬೆಯಲ್ಲಿ ಪಾಲಿಫಿನಾಲ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ . ಇದು ವೈರಸ್ ಸೋಂಕಿನಿಂದ ರಕ್ಷಿಸುವ ಗುಣವನ್ನು ಹೊಂದಿದೆ ಮತ್ತು ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

Published by: Yashaswini V | Nov 08, 2023

ಗ್ರೀನ್ ಟೀ

ಗ್ರೀನ್ ಟೀ ಎಲೆಗಳಲ್ಲಿ ಕ್ಯಾಟೆಚಿನ್ ಎಂಬ ಉತ್ಕರ್ಷಣ ನಿರೋಧಕಗಳಿವೆ, ಇದು ಸ್ವತಂತ್ರ ರಾಡಿಕಲ್ ಹಾನಿಯನ್ನು ತಡೆಯಲು ಮತ್ತು ಕ್ಯಾನ್ಸರ್ ಅನ್ನು ಹಲವು ರೀತಿಯಲ್ಲಿ ತಡೆಯಲು ಸಹಾಯ ಮಾಡುತ್ತದೆ.

Published by: Yashaswini V | Nov 08, 2023

ನಟ್ಸ್

ಬಾದಾಮಿ, ಗೋಡಂಬಿ, ವಾಲ್‌ನಟ್ಸ್ ಸೇರಿದಂತೆ ಹಲವು ನಟ್ಸ್ ಗಳಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಇ ಯುವಿ ವಿಕಿರಣ ಮತ್ತು ಕ್ಯಾನ್ಸರ್ ಉಂಟುಮಾಡುವ ಅಂಶಗಳಿಂದ ರಕ್ಷಿಸುತ್ತದೆ.

Published by: Yashaswini V | Nov 08, 2023

ಟೊಮ್ಯಾಟೊ

ಅಧ್ಯಯನಗಳು ಟೊಮ್ಯಾಟೊದಲ್ಲಿರುವ ಆಂಟಿಆಕ್ಸಿಡೆಂಟ್ ಲೈಕೋಪೀನ್ ತುಂಬಾ ಶಕ್ತಿಯುತವಾಗಿದೆ ಮತ್ತು ಬೀಟಾ-ಕ್ಯಾರೋಟಿನ್, ಆಲ್ಫಾ-ಕ್ಯಾರೋಟಿನ್ ಮತ್ತು ವಿಟಮಿನ್ ಇ ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುವ ಲಕ್ಷಣವನ್ನು ಹೊಂದಿವೆ ಎಂದು ಕಂಡುಹಿಡಿದಿದೆ.

Published by: Yashaswini V | Nov 08, 2023

ಸೂಚನೆ

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Nov 08, 2023

VIEW ALL

Read Next Story