ಪ್ರತಿಯೊಬ್ಬರೂ ಸುಂದರವಾಗಿ ಮತ್ತು ಸ್ಟೈಲಿಶ್ ಆಗಿ ಕಾಣಲು ಬಯಸುತ್ತಾರೆ. ಅದರಲ್ಲೂ ತುಟಿಗಳು ಗುಲಾಬಿ ಮತ್ತು ಮೃದುವಾಗಿರಬೇಕು ಎಂಬುದು ಅನೇಕರ ಬಯಕೆ. ಆದರೆ ಕಾಫಿ, ತಂಪು ಪಾನೀಯಗಳು ಮತ್ತು ರಾಸಾಯನಿಕಗಳ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ ತುಟಿಗಳು ಕಪ್ಪಾಗುತ್ತವೆ.
ಕಪ್ಪು ತುಟಿಗಳು ಸೌಂದರ್ಯವನ್ನು ಕೆಡಿಸುವುದು ಮಾತ್ರವಲ್ಲದೆ ಇತರರ ಮುಂದೆ ನಿಮ್ಮನ್ನು ನಾಚಿಕೆಪಡುವಂತೆ ಮಾಡುತ್ತದೆ. ಹೀಗಿರುವಾಗ ನೀವು ಕೆಲವು ಮನೆಮದ್ದು ಸಲಹೆಗಳನ್ನು ಅನುಸರಿಸಿದರೆ ಈ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಅಲೋವೆರಾ ಮತ್ತು ಜೇನುತುಪ್ಪದಿಂದ ಮಾಡಿದ ಲಿಪ್ ಪ್ಯಾಕ್ ಅನ್ನು ಹಚ್ಚಿದರೆ ತುಟಿಗಳು ಸುಂದರವಾಗಿ ಮತ್ತು ಮೃದುವಾಗಿ ಇರುತ್ತದೆ. ವಾರಕ್ಕೊಮ್ಮೆ ಈ ಪ್ಯಾಕ್ ಅನ್ನು ಬಳಸಬಹುದು.
ಕಪ್ಪು ತುಟಿಗಳನ್ನು ಕೆಂಪಾಗಿಸಲು ಜೇನುತುಪ್ಪ ಮತ್ತು ನಿಂಬೆಯ ಬಳಕೆ ಅತ್ಯುತ್ತಮ. ಜೇನುತುಪ್ಪ ಮತ್ತು ನಿಂಬೆಯಲ್ಲಿ ತ್ವಚೆಯನ್ನು ಹೊಳೆಯುವಂತೆ ಮಾಡುವ ಅಂಶಗಳಿವೆ. ಇವುಗಳನ್ನು ತುಟಿಗಳ ಮೇಲೆ ಹಚ್ಚುವುದರಿಂದ ತುಟಿಗಳು ಒಳಗಿನಿಂದ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಈ ಮನೆಮದ್ದನ್ನು ವಾರಕ್ಕೆ ಮೂರು ಬಾರಿ ಅನುಸರಿಸಬೇಕು.
ಗುಲಾಬಿ ದಳಗಳು ತುಟಿಗಳನ್ನು ಗುಲಾಬಿಯಂತೆ ಮಾಡಲು ಸಹಾಯ ಮಾಡುತ್ತದೆ. ಗುಲಾಬಿ ದಳಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಅದಕ್ಕೆ ನಿಂಬೆ ರಸ ಮತ್ತು ರೋಸ್ ವಾಟರ್ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಪ್ರತಿದಿನ ರಾತ್ರಿ ಮಲಗುವ ಮೊದಲು ತುಟಿಗಳಿಗೆ ಹಚ್ಚಿ. ಹೀಗೆ ಮಾಡುವುದರಿಂದ ತುಟಿಗಳ ಕಪ್ಪನ್ನು ಹೋಗಲಾಡಿಸುತ್ತದೆ.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.