ಹರಳೆಣ್ಣೆಯ ಪ್ರಯೋಜನಗಳು

ಹರಳೆಣ್ಣೆಯನ್ನು ಪ್ರತಿನಿತ್ಯ ಬಳಸುವುದರಿಂದ ದೇಹದ ಉಷ್ಣತೆಯನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಬೇಸಿಗೆಯು ಶುರುವಾಗುತ್ತಿರುವುದರಿಂದ ದೇಹವನ್ನು ಸದಾ ತಂಪಾಗಿರುವಂತೆ ಮಾಡುತ್ತದೆ.

ರೋಗನಿರೋಧಕ

ಹರಳೆಣ್ಣೆಯನ್ನು ನೆತ್ತಿಯ ಮೇಲೆ ಹಚ್ಚಿಕೊಳ್ಳುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು

ಸೊಂಪಾದ ಕೂದಲು

ಕೂದಲಿನ ಬೆಳವಣಿಗೆಗೆ ವಾರಕ್ಕೊಮ್ಮೆ ಹರಳೆಣ್ಣೆಯನ್ನು ಹಚ್ಚಿಕೊಂಡಲ್ಲಿ ಮೃದುವಾದ ಕೂದಲನ್ನು ಪಡೆಯಬಹುದು.

ಬಿಳಿ ಕೂದಲು

ಅತಿಯಾದ ರಾಸಾಯನಿಕ ಉತ್ಪನ್ನಗಳನ್ನು ಬಳಸಿದ್ದಲ್ಲಿ ಬಿಳಿ ಕೂದಲು ಹೆಚ್ಚಾಗುತ್ತಲೇ ಇದ್ದೂ,ಪ್ರತಿನಿತ್ಯ ಹರಳೆಣ್ಣೆಯನ್ನು ಬಳಸುವುದರಿಂದ ಕೂದಲು ಕಪ್ಪಾಗಿರಲು ಸಹಾಯ ಮಾಡುತ್ತದೆ.

ಕಪ್ಪು ಕಲೆ

ಮುಖದ ಮೇಲೆ ಕಪ್ಪಾದ ಕಲೆಗಳಿದ್ದೂ, ನಿತ್ಯವೂ ಹರಳೆಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಸುಂದರವಾದ ತ್ವಚೆಯನ್ನು ಪಡೆಯಬಹುದು.

ಕೀಲು ನೋವು

ಮನೆಯಲ್ಲಿ ವಯಸ್ಸಾದವರಿಗೆ ಆಗಾಗ ಕೀಲು ನೋವು ಕಾಣಿಸಿಕೊಂಡಲ್ಲಿ ಹರಳೆಣ್ಣೆಯನ್ನು ಬೆಚ್ಚಗೆ ಮಾಡಿ ಹಚ್ಚಿಕೊಳ್ಳುವುದರಿಂದ ನೋವು ನಿವಾರಣೆಯಾಗುತ್ತದೆ.

ಉರಿಯೂತ

ಹರಳೆಣ್ಣೆಯನ್ನು ನಿತ್ಯವೂ ಹೊಕ್ಕಳಿನ ಭಾಗಕ್ಕೆ ಹಚ್ಚುವುದರಿಂದ ಉರಿಯೂತ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಕಣ್ಣು

ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದು ಅಥವಾ ಉಬ್ಬುವ ಕಣ್ಣುಗಳಿದ್ದಲ್ಲಿ ಮಲಗುವ ಮುನ್ನ ಹರಳೆಣ್ಣೆಯನ್ನು ಕಣ್ಣಿನ ಸುತ್ತಲೂ ಮೃದುವಾಗಿ ಹಚ್ಚಿ ಇದರಿಂದ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ದೇಹದ ಸೌಂದರ್ಯ

ಹರಳೆಣ್ಣೆಯನ್ನು ವಾರಕ್ಕೆ ಎರಡು ಬಾರಿ ದೇಹಕ್ಕೆ ಮಸಾಜ್ ರೂಪದಲ್ಲಿ ಹಚುತ್ತಿದ್ದರೆ ದೇಹದ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು.

VIEW ALL

Read Next Story