ಕಳೆದು ಹೋದ ಮುಖದ ಸೌಂದರ್ಯ ಮತ್ತೆ ಸಿಗಬೇಕಾದರೆ ದಾಸವಾಳದ ಹೂವನ್ನು ಹೀಗೆ ಬಳಸಿ
ದಾಸವಾಳದ ಹೂವು ಸಾಮಾನ್ಯವಾಗಿ ತ್ವಚೆಯ ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಹೊಳೆಯುವ ಮೈ ಕಾಂತಿಗಾಗಿ ದಾಸವಾಳದ ಹೂವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಬೇಕು.
ಇದಕ್ಕಾಗಿ ಎರಡು ಚಮಚ ದಾಸವಾಳದ ಪುಡಿಯನ್ನು ಜೆನುತುಪ್ಪಕ್ಕೆ ಬೆರೆಸಿ ಮುಖಕ್ಕೆ ಹಚ್ಚಬೇಕು.
ಆಲೋವಿರಾ ಜೆಲ್ ಕೂಡಾ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಇದು ಒಣ ತ್ವಚೆ, ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಒಂದು ತಟ್ಟೆಯಲ್ಲಿ ೪ ದಾಸವಾಳದ ಹೂವು ತೆಗೆದುಕೊಂಡು ಅದಕ್ಕೆ ಒಂದು ಚಮಚ ಆಲೋವಿರಾ ಜೆಲ್ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ೨೦ ನಿಮಿಷಗಳವರೆಗೆ ಹಾಗೆಯೇ ಬಿಡಿ.
ಬೇಸಿಗೆಯಲ್ಲಿ ಬಿಸಿಲು ಮತ್ತು ಟ್ಯಾನಿಂಗ್ ನಿಂದ ಮುಖದ ಕಾಂತಿ ಕಡಿಮೆಯಾಗುತ್ತದೆ. ಇದಕ್ಕಾಗಿ ಮೊಸರು ಮತ್ತು ದಾಸವಾಳದ ಹೂವನ್ನು ಬಳಸಬಹುದು.
ಇದಕ್ಕಾಗಿ ದಾಸವಾಳದ ಹೂವಿನ ಪೇಸ್ಟ್ ಗೆ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಬೇಕು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಅನುಮೋದಿಸುವುದಿಲ್ಲ.