ಬೇವು ಬ್ಯಾಕ್ಟೀರಿಯಾಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಶಕ್ತಿ ಹೊಂದಿವೆ. ಶೀಘ್ರವೇ ಬಿರುಕು ಬಿಟ್ಟ ಚರ್ಮ ಆರೋಗ್ಯಕರವಾಗಿ ಕಂಗೊಳಿಸುತ್ತದೆ.
ಹರಳೆಣ್ಣೆಯಲ್ಲಿ ಕೊಬ್ಬಿನಾಮ್ಲವು ಸಮೃದ್ಧವಾಗಿದೆ ಮತ್ತು ಇದರಿಂದ ಅದು ಚರ್ಮಕ್ಕೆ ತೇವಾಂಶ ನೀಡುತ್ತದೆ.
ಹಾಲು ಮತ್ತು ಜೇನುತುಪ್ಪದ ಮಿಶ್ರಣವನ್ನು ರಾತ್ರಿ ಸಮಯದಲ್ಲಿ ಹಚ್ಚಿ. ಜೇನುತುಪ್ಪ ತೇವಗೊಳಿಸಿ ಔಷಧವಾಗಿ ಕೆಲಸ ಮಾಡುವುದರಿಂದ ಹಿಮ್ಮಡಿಯನ್ನು ಮೃದುಗೊಳಿಸುತ್ತದೆ.
ಚಳಿಗಾಲದಲ್ಲಿ ಸಿಗುವ ಹಣ್ಣುಗಳ ಮಾಸ್ಕ್ ಅನ್ನು ಪಾದಗಳ ಮೇಲೆ ಮಸಾಜ್ ಮಾಡುವುದರಿಂದ ಉತ್ತಮ ಫಲಿತಾಂಶ ನೀಡುತ್ತದೆ.
ಅರಿಶಿನದೊಂದಿಗೆ ಬೇವಿನ ಎಲೆಗಳನ್ನು ಪುಡಿ ಮಾಡಿ ಬೆರೆಸಿ ಹಚ್ಚುವುದರಿಂದ ಮೃದುವಾದ ಮತ್ತು ನಯವಾದ ಹಿಮ್ಮಡಿ ನಿಮ್ಮದಾಗುತ್ತದೆ.
ವಾರದಲ್ಲಿ ಎರಡು ಬಾರಿ ಮಾಗಿದ ಬಾಳೆ ಹಣ್ಣಿನ್ನು ಪಾದಕ್ಕೆ ಹಚ್ಚುವುದರಿಂದ ಅತ್ಯಂತ ವೇಗವಾಗಿ ಹಿಮ್ಮಡಿ ಒಡೆತ ಗುಣವಾಗುವುದು.