ಜುಮ್ಮೆನಿಸುವಿಕೆ ಸಮಸ್ಯೆಯಿರುವ ಹಲ್ಲುಗಳಿಗೆ ಲವಂಗದ ಎಣ್ಣೆಯು ಪ್ರಯೋಜನಕಾರಿಯಾಗಿದೆ ಮತ್ತು ಇದು ನೋವಿನಿಂದ ಪರಿಹಾರವನ್ನು ನೀಡುತ್ತದೆ. ಇದರ ಬಳಕೆಯು ಬಾಯಿಯ ಸೂಕ್ಷ್ಮಾಣುಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಪುದೀನಾ ತೈಲವು ಹಲ್ಲುಗಳ ನೋವಿಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದು. ಮೆಂಥಾಲ್ ಅಂಶವು ಪುದೀನಾದಲ್ಲಿದ್ದು, ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.
ಇದರಲ್ಲಿರುವ ಇರುವ ನೈಸರ್ಗಿಕ ಆಂಶ ವಸಡುಗಳಲ್ಲಿ ಕಂಡುಬರುವ ರಕ್ತ ಸ್ರಾವ ಹಾಗೂ ಇತರೆ ಸಮಸ್ಯೆಗಳಿಂದ ಪರಿಹಾರವನ್ನು ಒದಗಿಸುತ್ತದೆ.
ಅಲೋವೆರಾದಿಂದ ಹಲ್ಲನ್ನು ಮಸಾಜ್ ಮಾಡುವುದರಿಂದ ಹಲ್ಲಿನಲ್ಲಿನ ಬ್ಯಾಕ್ಟೀರಿಗಳನ್ನು ಹೋಗಿಸಲು ಸಹಕಾರಿ.
ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರೆಸಿ ಗಾರ್ಗಲ್ ಮಾಡುವುದರಿಂದ ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗುತ್ತದೆ.
ಅರಿಶಿನವು ವಸುಡುಗಳ ಸಮಸ್ಯೆಗೆ ಉತ್ತಮ ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ವಾರದಲ್ಲಿ ಎರಡು ಬಾರಿ ಅರಿಶಿನದಿಂದ ಹಲ್ಲು ಉಜ್ಜುವುದರಿಂದ ಹಲ್ಲು ನೋವು ಕಡಿಮೆ ಆಗುವುದರ ಜೊತೆಗೆ ಶುಚಿಯಾಗಿರುತ್ತದೆ.
ತೆಂಗಿನ ಎಣ್ಣೆಯಿಂದ ಬಾಯಲ್ಲಲಿ ಹಾಕಿ ಮುಕ್ಕಳಿಸುವುದರಿಂದ ಇದರಿಂದ ಕಾಲ ಕ್ರಮೇಣ ವಸುಡಿನ ಸಮಸ್ಯೆ ಪರಿಹಾರವಾಗುತ್ತದೆ.