ಇದು ವಾಕರಿಕೆ, ವಾಂತಿ ಮತ್ತು ಅಜೀರ್ಣದಿಂದಾಗಿ ಉಂಟಾಗಿರುವ ವಾಯುವಿನ ಸಮಸ್ಯೆ ಕಡಿಮೆ ಮಾಡುವುದು.
ಓಮ ಕಾಳುಗಳನ್ನು ಬಿಸಿ ನೀರಲ್ಲಿ ಹಾಕಿ ಸೇವಿಸುವುದರಿಂದ ವಾಯು ಮತ್ತು ಹೊಟ್ಟೆಯ ಸಮಸ್ಯೆಗಳು ದೂರವಾಗುವುದು.
ಒಂದು ವಾರ ಕಾಲ ಕೊತ್ತಂಬರಿ ಬೀಜದ ನೀರು ಸೇವನೆ ಮಾಡಿದರೆ ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ
ಕ್ಯಾರೆಟ್ ಜ್ಯೂಸ್ ಕುಡಿಯುದರಿಂದ ಹೊಟ್ಟೆಯ ಆಮ್ಲವನ್ನು ಹೀರಿಕೊಳ್ಳಲು ನೆರವಾಗುವುದು ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ನಿವಾರಿಸುವುದು.
ಮೊಸರಿಗೆ ಸ್ವಲ್ಪ ಜೀರಿಗೆ ಮತ್ತು ಉಪ್ಪು ಹಾಕಿಕೊಂಡು ಸೇವನೆ ಮಾಡಿದರೆ ಅದರಿಂದ ಅಜೀರ್ಣ ಸಮಸ್ಯೆಯು ಪರಿಹಾರ ಆಗುವುದು.
ಅಜೀರ್ಣ ಸಮಸ್ಯೆಯ ನಿವಾರಣೆಗೆ ಶುಂಠಿ ರಸ ಸಹಕಾರಿ
ಆಹಾರದಲ್ಲಿ ಲವಂಗ ಸೇವನೆಯಿಂದ ವಾಕರಿಕೆ ಅಜೀರ್ಣ ತಡೆಯಬಹುದು.