ಅರಿಶಿನ

ಒಸಡುಗಳ ರಕ್ತಸ್ರಾವವನ್ನು ನಿಲ್ಲಿಸಲು ಅರಿಶಿನವು ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿದೆ. ಅರ್ಧ ಚಮಚ ಉಪ್ಪು ಮತ್ತು ಸಾಸಿವೆ ಎಣ್ಣೆಯನ್ನು ಒಂದು ಚಮಚ ಅರಿಶಿನ ಪುಡಿಯೊಂದಿಗೆ ಬೆರೆಸಿ ಹಲ್ಲು ಮತ್ತು ಒಸಡುಗಳಿಗೆ ಹಚ್ಚಿ ಮಸಾಜ್ ಮಾಡಿದರೆ ಸುಲಭ ಪರಿಹಾರ ಸಿಗುತ್ತದೆ.

Yashaswini V
Mar 09,2023

ಲವಂಗದ ಎಣ್ಣೆ

ಹಲ್ಲುಜ್ಜಿದ ನಂತರ ಊದಿಕೊಂಡ ವಸಡು ಅಥವಾ ರಕ್ತಸ್ರಾವದ ಸಮಸ್ಯೆ ಎದುರಿಸುತ್ತಿದ್ದರೆ ಪೀಡಿತ ಪ್ರದೇಶದಲ್ಲಿ ಲವಂಗಡ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ.

ಕೊಬ್ಬರಿ ಎಣ್ಣೆ

ಒಂದು ಹತ್ತಿ ಉಂಡೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಅದ್ದಿ ಅದನ್ನು ಪೀಡಿತ ಪ್ರದೇಶದಲ್ಲಿ ಅನ್ವಯಿಸುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ.

ನಿಂಬೆ ಹಣ್ಣು

ಮೂರರಿಂದ ನಾಲ್ಕು ಹನಿ ನಿಂಬೆ ರಸವನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ದಿನಕ್ಕೆ ಕನಿಷ್ಠ 5 ಬಾರಿ ತೊಳೆಯಿರಿ.

ಟೀ ಬ್ಯಾಗ್

ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ಪ್ರತಿದಿನ 10-15 ನಿಮಿಷಗಳ ಕಾಲ ನೆನೆಸಿಡಿ. ಅದು ತಣ್ಣಗಾದ ಬಳಿಕ ಒಸಡುಗಳಿಗೆ ಅನ್ವಯಿಸಿ ಹತ್ತು ನಿಮಿಷಗಳ ನಂತರ ವಾಶ್ ಮಾಡಿ.

ಉಪ್ಪು ನೀರು

ಉಪ್ಪು ನೀರನ್ನು ನಿಯಮಿತವಾಗಿ ಬಳಸುವುದು ಒಸಡುಗಳಲ್ಲಿ ರಕ್ತಸ್ರಾವ ಕಡಿಮೆ ಆಗುತ್ತದೆ.

ಜೇನುತುಪ್ಪ

ಬೆರಳಿನಲ್ಲಿ ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ಒಸಡುಗಳ ಮೇಲೆ ಲಘುವಾಗಿ ಮಸಾಜ್ ಮಾಡಿ. ದಿನಕ್ಕೆರಡು ಬಾರಿ ಈ ಕೆಲಸ ಮಾಡಿದರೆ ಒಸಡುಗಳಲ್ಲಿ ರಕ್ತಸ್ರಾವ ಕಡಿಮೆ ಆಗುತ್ತದೆ.

VIEW ALL

Read Next Story