ಅನಿಯಂತ್ರಿತ ಋತುಚಕ್ರದ ಸಮಸ್ಯೆಗೆ ಮನೆಮದ್ದು

Yashaswini V
Apr 15,2024

ಋತುಚಕ್ರ

ಸರಿಯಾದ ಸಮಯಕ್ಕೆ ಮುಟ್ಟು ಆಗದಿರುವುದು ಸಾಮಾನ್ಯ ಸಮಸ್ಯೆ. ಇದಕ್ಕೆ ಒತ್ತಡ, ವೇಗದ ಜೀವನಶೈಲಿ, ಕಳಪೆ ಆಹಾರ ಪದ್ದತಿ ಸೇರಿದಂತೆ ಹಲವು ಕಾರಣಗಳಿವೆ. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. ಅವುಗಳೆಂದರೆ...

ಅರಿಶಿನ

ಆಯುರ್ವೇದ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನವನ್ನು ಮುಟ್ಟಿನ ಸಮಸ್ಯೆಗೆ ರಾಮಬಾಣ. ನಿತ್ಯ ಒಂದು ಲೋಟ ನೀರಿನಲ್ಲಿ ಚಿಟಿಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಅನಿಯಂತ್ರಿತ ಪೀರಿಯಡ್ಸ್ ಸಮಸ್ಯೆಗೆ ಪರಿಹಾರ ಪಡೆಯಬಹುದು.

ಶುಂಠಿ

ಪ್ರತಿದಿನ ಒಂದು ಕಪ್ ಶುಂಠಿ ಚಹಾ ತಯಾರಿಸಿ ಕುಡಿಯುವುದರಿದ್ನ ಅನಿಯಂತ್ರಿತ ಋತುಚಕ್ರದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಪರಂಗಿ ಕಾಯಿ

ನಿಯಮಿತವಾಗಿ ಪರಂಗಿ ಕಾಯಿ ಸೇವಿಸುವುದರಿಂದ ಮಾನಸಿಕ ಒತ್ತಡದಿಂದ ಉಂಟಾಗಬಹುದಾದ ಅನಿಯಮಿತ ಋತುಚಕ್ರದ ಸಮಸ್ಯೆಗೆ ಪರಿಹಾರ ಪಡೆಯಬಹುದು.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪಿನ ರಸ ಸೇವಿಸುವುದರಿಂದ ಅನಿಯಂತ್ರಿತ ಪೀರಿಯಡ್ಸ್ ಸಮಸ್ಯೆಯಿಂದ ಸುಲಭ ಪರಿಹಾರ ದೊರೆಯುತ್ತದೆ.

ಎಳ್ಳು-ಬೆಲ್ಲ

ಎಳ್ಳು-ಬೆಲ್ಲವನ್ನು ಪುಡಿ ಮಾಡಿ ಲಡ್ಡು ತಯಾರಿಸಿ ಸೇವಿಸುವುದರಿಂದ ಹಾರ್ಮೋನ್ ಸಮತೋಲನಗೊಳ್ಳುತ್ತದೆ. ಇದು ಅನಿಯಂತ್ರಿತ ಋತುಚಕ್ರದ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story