ಕೆಲವು ಫುಡ್ ಕಾಂಬಿನೇಷನ್’ಗಳು ನೋಡಲು ಆಕರ್ಷಣೀಯವಾಗಿ, ತಿನ್ನಲೇಬೇಕು ಎಂದು ಮನಸ್ಸಿಗೆ ತೋಚುವಂತೆ ಮಾಡುತ್ತವೆ. ಆದರೆ ಅದು ಆರೋಗ್ಯಕ್ಕೆ ಎಷ್ಟು ಹಿತಕರ ಎಂಬುದನ್ನು ಪರಿಗಣಿಸುವುದು ಕಡಿಮೆ. ಅಂತಹ ಫುಡ್ ಕಾಂಬಿನೇಷನ್'ಗಳಲ್ಲಿ ಗುಲಾಬ್ ಜಾಮೂನ್ ಐಸ್ ಕ್ರೀಂ ಕೂಡ ಒಂದು.
ಗುಲಾಬ್ ಜಾಮೂನ್ ಐಸ್ ಕ್ರೀಂ ಇತ್ತೀಚಿನ ದಿನಗಳಲ್ಲಿ ಭಾರೀ ಟ್ರೆಂಡಿಂಗ್’ನಲ್ಲಿರುವ ಸಿಹಿವಸ್ತು. ಶುಭಸಮಾರಂಭಗಳಲ್ಲಿ ಹೆಚ್ಚಾಗಿ ಇರುತ್ತದೆ.
ಅಂದಹಾಗೆ ಐಸ್ ಕ್ರೀಂ ತಿನ್ನುವುದರಿಂದ ಕೆಲವು ಪ್ರಯೋಜನಗಳಿವೆ. ಒತ್ತಡ, ಆತಂಕ ಕಡಿಮೆಯಾಗಿ, ಮನಸ್ಸು ಶಾಂತವಾಗಿರುತ್ತದೆ. ತಲೆನೋವಿನಂತಹ ಸಮಸ್ಯೆಗಳೂ ಸಹ ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇದರ ಜೊತೆ ಜಾಮೂನ್ ಬೆರೆಸಿ ತಿಂದರೆ ಅಡ್ಡ ಪರಿಣಾಮ ಹೆಚ್ಚಾಗಿ ಕಾಡಬಹುದು ಎಂದು ಹೇಳಲಾಗುತ್ತದೆ.
ಈ ಎರಡು ಕಾಂಬಿನೇಷನ್’ಗಳನ್ನು ತಿನ್ನುವುದರಿಂದ ಸಕ್ಕರೆಯ ಮಟ್ಟ ಹೆಚ್ಚಾಗಬಹುದು. ಮಧುಮೇಹ ಬರುವ ಸಾಧ್ಯತೆಯೂ ಹೆಚ್ಚು. ಏಕೆಂದರೆ ಐಸ್ ಕ್ರೀಮ್ ಮತ್ತು ಗುಲಾಬ್ ಜಾಮೂನ್’ನಲ್ಲಿ ಸಕ್ಕರೆಯ ಅಂಶ ತುಂಬಾ ಹೆಚ್ಚಾಗಿರುತ್ತದೆ.
ಗುಲಾಬ್ ಜಾಮೂನ್ ಮತ್ತು ಐಸ್ ಕ್ರೀಂನ್ನು ಒಟ್ಟಿಗೆ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಇದು ಸಾಕು. ಹೀಗಾಗಿ ಇವೆರಡನ್ನು ಒಟ್ಟಿಗೆ ತಿನ್ನದಿರುವುದೇ ಒಳ್ಳೆಯದು.
ಊಟದ ನಂತರ ಸಿಹಿತಿಂಡಿಗಳನ್ನು ತಿನ್ನಬಾರದು. ಈ ರೀತಿ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚಾಗುತ್ತವೆ. ಊಟದ ನಂತರ ಸಿಹಿ ತಿಂದರೆ ಅದು ಮೊದಲು ಸೇವಿಸಿದ ಆಹಾರದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.
ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.