ದಿನಕ್ಕೆ ಇಷ್ಟು ಪೇರಳೆ ಎಲೆ ತಿಂದರಷ್ಟೇ ಲಾಭ !

Ranjitha R K
Jan 05,2024

ಎಷ್ಟು ಪೇರಳೆ ಎಲೆಗಳನ್ನು ಸೇವಿಸಬೇಕು

ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ವಿಟಮಿನ್ ಸಿ, ಕಬ್ಬಿಣ, ರಂಜಕ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸತು, ತಾಮ್ರ, ಕಾರ್ಬೋಹೈಡ್ರೇಟ್, ಡಯೆಟರಿ ಫೈಬರ್ ಪೇರಲದಲ್ಲಿ ಕಂಡುಬರುತ್ತದೆ. ಇದರ ಸೇವನೆಯಿಂದ ಹಲವಾರು ರೀತಿಯ ಕಾಯಿಲೆಗಳು ನಿವಾರಣೆಯಾಗುತ್ತವೆ. ಆದರೆ ದಿನಕ್ಕೆ ಎಷ್ಟು ಪೇರಳೆ ಎಲೆಗಳನ್ನು ಸೇವಿಸಬೇಕು ಎಂದು ತಿಳಿದಿರಬೇಕು.

ಪೇರಳೆ ಎಲೆ ಪ್ರಯೋಜನ

ಈ ಎಲೆಯಲ್ಲಿ ಆಂಟಿ ಡಯಾಬಿಟಿಕ್, ಆಂಟಿ ಮೈಕ್ರೋಬಿಯಲ್, ಆಂಟಿ ಡಯಾರಿಯಲ್, ಆಂಟಿ ಫಂಗಲ್ ಲಕ್ಷಣ ಕಂಡು ಬರುತ್ತದೆ. ಇದರ ಸೇವನೆಯಿಂದ ಮಧುಮೇಹ, ಸಾಂಕ್ರಾಮಿಕ ರೋಗ, ಹೃದ್ರೋಗ, ಮುಂತಾದ ಸಮಸ್ಯೆ ದೂರವಾಗುತ್ತದೆ.

2 ರಿಂದ 3 ಎಲೆಗಳನ್ನು ಸೇವಿಸಬೇಕು

ಒಂದು ದಿನದಲ್ಲಿ ನೀವು 2 ರಿಂದ 3 ಎಲೆಗಳನ್ನು ಮಾತ್ರ ಸೇವಿಸಬೇಕು. ಇದಕ್ಕಿಂತ ಹೆಚ್ಚಿನ ಪ್ರಮಾಣದ ಎಲೆಯನ್ನು ತಿಂದರೆ ಇತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪೇರಳೆ ಎಲೆಯ ಕಷಾಯ

ಆದರೆ ಈ ಎಲೆಯ ಕಷಾಯ ಮಾಡಿ ಕುಡಿಯುವುದಾದರೆ 4 ಲೋಟ ನೀರಿಗೆ 7 ರಿಂದ 10 ಪೇರಳೆ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು.

ತೂಕ ಇಳಿಕೆಗೆ ಸಹಾಯಕ

ತೂಕ ಇಳಿಕೆಗೆ ಈ ಎಲೆಗಳು ಸಹಾಯಕ. ಇದು ದೇಹದ ಕ್ಯಾಲೋರಿಗಳ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಹೆಚ್ಚಾಗುತ್ತದೆ

ಆಂಟಿ ಬ್ಯಾಕ್ಟಿರಿಯಲ್, ಆಂಟಿಮೈಕ್ರೊಬಿಯಲ್ ಅಂಶಗಳಿದ್ದು, ಇದು ಜೀರ್ಣಕ್ರಿಯೆ ಶಕ್ತಿಯನ್ನು ಬಲಪಡಿಸಲು ಕೆಲಸ ಮಾಡುತ್ತದೆ.

ಅಲರ್ಜಿಯಿಂದ ಮುಕ್ತಿ

ಅಲರ್ಜಿ ನಿವಾರಕ ಗುಣಗಳು ಪೇರಳೆ ಎಲೆಗಳಲಿದ್ದು, ಇದು ಅಲರ್ಜಿಯಿಂದ ಉಪಶಮನ ನೀಡುತ್ತದೆ.

ಹಲ್ಲು ನೋವಿಗೆ ಪರಿಹಾರ

ಹಲ್ಲು ನೋವು ಕಡಿಮೆ ಮಾಡಲು ಪೇರಳೆ ಎಲೆಗಳನ್ನು ಪುಡಿ ಮಾಡಿ ಅದರ ಪೇಸ್ಟ್ ಅನ್ನು ಹಚ್ಚಬಹುದು. ಇದು ಹಲ್ಲು ನೋವಿನಿಂದ ಪರಿಹಾರ ನೀಡುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story