Foods To Improve Vision: ಕಣ್ಣಿನ ದೃಷ್ಟಿ ಸುಧಾರಣೆಗೆ ನಿಮ್ಮ ಡಯಟ್ನಲ್ಲಿರಲಿ ಈ ಸೂಪರ್ ಫುಡ್ಸ್

Published by: Yashaswini V | May 06, 2024

ದೃಷ್ಟಿ ಸಮಸ್ಯೆ

ಪ್ರಸ್ತುತ, ದೀರ್ಘಾವಧಿಯವರೆಗೆ ಗ್ಯಾಜೆಟ್ ಗಳ ವೀಕ್ಷಣೆಯಿಂದಾಗಿ ಪ್ರತಿಯೊಬ್ಬರಲ್ಲಿಯೂ ದೃಷ್ಟಿ ಸಮಸ್ಯೆ ಸಾಮಾನ್ಯವಾಗಿದೆ.

Published by: Yashaswini V | May 06, 2024

ದೃಷ್ಟಿ ಸುಧಾರಣೆಗೆ ಆಹಾರ

ಆರೋಗ್ಯ ತಜ್ಞರ ಪ್ರಕಾರ, ನಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳ ಬಳಕೆಯಿಂದ ದೃಷ್ಟಿಯನ್ನು ಸುಧಾರಿಸಬಹುದು ಎನ್ನಲಾಗುತ್ತದೆ. ಅವುಗಳೆಂದರೆ...

Published by: Yashaswini V | May 06, 2024

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪಿನ ನಿಯಮಿತ ಬಳಕೆಯು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದಕ್ಕಾಗಿ, ನಿತ್ಯ ನಿಮ್ಮ ಆಹಾರದಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸುವುದು ಪ್ರಯೋಜನಕಾರಿ ಆಗಿದೆ.

Published by: Yashaswini V | May 06, 2024

ಆರೆಂಜ್ ಜ್ಯೂಸ್

ಆರೆಂಜ್ ಜ್ಯೂಸ್ ನಲ್ಲಿ ಕರಿಮೆಣಸು, ಕಲ್ಲುಪ್ಪು ಬೆರೆಸಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ನಿರಂತರ 3 ತಿಂಗಳು ಹೀಗೆ ಮಾಡುವುದರಿಂದ ದೃಷ್ಟಿಯನ್ನು ಸುಧಾರಿಸಬಹುದು.

Published by: Yashaswini V | May 06, 2024

ಬಾದಾಮಿ

ನಿತ್ಯ 5-6 ಬಾದಾಮಿಯನ್ನು ರಾತ್ರಿ ವೇಳೆ ನೆನೆಸಿತ್ತು ಬೆಳಿಗ್ಗೆ ಎದ್ದ ಕೂಡಲೇ ಹಾಲಿನೊಂದಿಗೆ ಈ ಬಾದಾಮಿಯನ್ನು ಸೇವಿಸಿ. ಇದರಿಂದ ಕಣ್ಣಿನ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

Published by: Yashaswini V | May 06, 2024

ತ್ರಿಫಲ ಚೂರ್ಣ

ತ್ರಿಫಲ ಚೂರ್ಣವನ್ನು ರಾತ್ರಿ ನೀರಿನಲ್ಲಿ ನೆನೆಸಿತ್ತು ಬೆಳಿಗ್ಗೆ ಅದೇ ನೀರಿನಿಂದ ಕಣ್ಣುಗಳನ್ನು ತೊಳೆಯಿರಿ. ಇದರಿಂದ ದೃಷ್ಟಿ ಸುಧಾರಿಸಬಹುದು ಎನ್ನಲಾಗುತ್ತದೆ.

Published by: Yashaswini V | May 06, 2024

ಕ್ಯಾರೆಟ್

1 ಗ್ಲಾಸ್ ಕ್ಯಾರೆಟ್ ರಸದೊಂದಿಗೆ ಅರ್ಧ ಗ್ಲಾಸ್ ಪಾಲಕ್ ರಸವನ್ನು ಮಿಶ್ರಣ ಮಾಡಿ ನಿತ್ಯ ಸೂರ್ಯೋದಯಕ್ಕೆ ಮೊದಲು ಇಲ್ಲವೇ ಸೂರ್ಯಾಸ್ತದ ಬಳಿಕ ಸೇವಿಸುವುದರಿಂದ ದೃಷ್ಟಿ ಸುಧಾರಿಸಬಹುದು ಎನ್ನಲಾಗುತ್ತದೆ.

Published by: Yashaswini V | May 06, 2024

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | May 06, 2024

VIEW ALL

Read Next Story