ಶನಿದೇವರ ಅನುಗ್ರಹವಿದ್ದವರಿಗೆ ಜೀವನದಲ್ಲಿ ಯಾವುದೇ ರೀತಿಯಾದ ಸಮಸ್ಯೆಗಳು ಎದುರಾಗುವುದಿಲ್ಲ.
ಶನಿದೇವರ ವಕ್ರ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಉದ್ಯೋಗ, ವ್ಯವಹಾರ & ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತೀರಿ.
ಶನಿವಾರದಂದು ನ್ಯಾಯ ದೇವರಾದ ಶನಿಯ ಆರಾಧನೆಯಿಂದ ನಮಗೆ ಆರ್ಥಿಕ, ಮಾನಸಿಕ ಮತ್ತು ದೈಹಿಕ ಪ್ರಯೋಜನಗಳು ದೊರೆಯುತ್ತವೆ.
ಪ್ರತಿ ಶನಿವಾರವೂ ಶನಿದೇವರ ದೇವಾಲಯಕ್ಕೆ ಹೋಗಿ ಶನಿದೇವರ ಪಾದಗಳ ದರ್ಶನ ಮಾಡುವುದರಿಂದ ಶನಿದೋಷದ ಪ್ರಭಾವ ಕಡಿಮೆಯಾಗುತ್ತದೆ.
ಪ್ರತಿ ಶನಿವಾರ ಶನಿದೇವರ ಮಂತ್ರವಾದ 'ಓಂ ಶನಿಶ್ಚರಾಯ ನಮಃ' ಜಪಮಾಲೆಯನ್ನು ಪಠಿಸಬೇಕು. ಇದನ್ನು ಪಠಿಸಿದ ನಂತರ ಶನಿ ಚಾಲೀಸಾವನ್ನು ಪಠಿಸಬೇಕು.
ಬಡವರಿಗೆ ದಾನ ಮತ್ತು ಸೇವೆ ಮಾಡುವುದರಿಂದಲೂ ಶನಿದೇವರನ್ನ ಸಂತೋಷಪಡಿಸಬಹುದು. ಇದು ಜಾತಕದಲ್ಲಿ ಶನಿದೋಷದ ಪ್ರಭಾವವನ್ನು ಕಡಿಮೆ ಮಾಡುತ್ತದೆ.
ಶನಿವಾರದ ದಿನ ಕಪ್ಪು ಎಳ್ಳನ್ನು ದಾನ ಮಾಡುವುದರಿಂದಲೂ ನಿಮಗೆ ಶನಿದೇವರ ಆಶೀರ್ವಾದವೂ ದೊರೆಯುತ್ತದೆ.
ಶನಿದೇವರನ್ನು ಪೂಜಿಸುವಾಗ ನೀವು ಅವರ ಕಣ್ಣುಗಳನ್ನು ನೋಡಬಾರದು. ಇದರಿಂದ ಶನಿ ದೋಷ ಉಂಟಾಗಬಹುದು.