ಚಹಾ

ಆರೋಗ್ಯಕರ ಚಹಾ ಹೀಗೆ ತಯಾರಿಸಿ

Ranjitha R K
Jan 31,2023

ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ

ಚಹಾ ಪ್ರಿಯರಿಗೆ ಚಹಾ ಕುಡಿಯಲು ಒಂದು ನೆಪ ಬೇಕು. ಆದರೆ ಪದೇ ಪದೇ ಚಹಾ ಕುಡಿಯುವುದು ಕೂಡಾ ಒಳ್ಳೆಯದಲ್ಲ.

ಆರೋಗ್ಯಕರ ಮಾಡಬಹುದು

ಚಹಾದಲ್ಲಿರುವ ಕೆಫಿನ್ ಮತ್ತು ಟೆನಿನ್ ಕಾರಣ ಇದನ್ನು ಆರೋಗ್ಯಕರ ಪಾನೀಯ ಎಂದು ಪರಿಗಣಿಸುವುದಿಲ್ಲ. ಆದರೆ ಚಹಾವನ್ನು ಆರೋಗ್ಯಕರವಾಗಿ ಮಾಡುವುದು ಕೂಡಾ ಸಾಧ್ಯ .

ತಯಾರಿಸುವ ವಿಧಾನ ಹೇಗೆ ?

ಡಯಾಟಿಷಿಯನ್ ಮತ್ತು ನ್ಯೂಟ್ರೀಶಿಯನಿಸ್ಟ್ ಪ್ರಕಾರ ಚಹಾವನ್ನು ಆರೋಗ್ಯಕರ ಪಾನೀಯವನ್ನಾಗಿ ಬದಲಾಯಿಸುವುದು ಹೇಗೆ ನೋಡೋಣ.

ಸಕ್ಕರೆ ಬೇಡ

ಚಹಾದಿಂದ ಸಕ್ಕರೆಯನ್ನು ತೆಗೆದು ಹಾಕಿದರೆ ಚಹಾ ಕೂಡಾ ಆರೋಗ್ಯಕರವೇ.

ಸಕ್ಕರೆ ಕಡಿಮೆ ಮಾಡಿ

ಪ್ರತಿ ಚಮಚ ಸಕ್ಕರೆ ನಮ್ಮ ಚಹಾಕ್ಕೆ 20 ಕ್ಯಾಲೋರಿಯನ್ನು ಸೇರಿಸುತ್ತದೆ. ಸಕ್ಕರೆಯನ್ನು ಆದಷ್ಟು ಕಡಿಮೆ ಮಾಡಿ.

ನೈಸರ್ಗಿಕ ವಸ್ತು ಬಳಸಿ

ಸಕ್ಕರೆ ಬದಲಿಗೆ ಚಹಾಕ್ಕೆ ಶುಂಟಿ , ಚಕ್ಕೆ, ನಿಂಬೆ, ಬೆಲ್ಲ ಮುಂತಾದ ನೈಸರ್ಗಿಕ ವಸ್ತುಗಳನ್ನು ಸೇರಿಸಿಕೊಳ್ಳಿ. ಪುದೀನಾ ಕೂಡ ಬಳಸಬಹುದು.

ನಿಂಬೆ

ನಿಂಬೆ ಸೇರಿಸಿದರೆ ಚಹಾ ಬಹಳಷ್ಟು ಆರೋಗ್ಯಕರವಾಗಿರುತ್ತದೆ.

ಯಾವ ಹಾಲು ಬಳಸಬೇಕು

ಸೋಯಾ ಹಾಲು, ಬಾದಾಮಿ ಹಾಲು, ಕೆನೆ ರಹಿತ ಹಾಲನ್ನು ಚಹಾಕ್ಕೆ ಬಳಸಬಹುದು.

ಕುದಿಸಿ ತಯಾರಿಸಿ

ಇನ್ಸ್ಟಂಟ್ ಟೀ ಬ್ಯಾಗ್ ಗಳನ್ನು ಬಳಸುವ ಬದಲು ಯಾವಾಗಲೂ ಚಹಾವನ್ನು ಕುದಿಸಿ ತಯಾರಿಸಿ. ಇದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.

VIEW ALL

Read Next Story