ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಲ್ಲಿ ರಕ್ತನಾಳಗಳನ್ನು ನಿರ್ಬಂಧಿಸುವುದಲ್ಲದೆ ಹೃದಯಾಘಾತ ಮತ್ತು ಹೃದಯ ಕಾಯಿಲೆಯಿಂದ ಬಳಲಬೇಕಾಗುತ್ತದೆ.
ಹೀಗಾಗಿಯೇ ಕೊಲೆಸ್ಟ್ರಾಲ್ ಕಂಟ್ರೋಲ್‌ನಲ್ಲಿ ಇಡುವುದು ಮುಖ್ಯ, ಇಲ್ಲದಿದ್ರೆ ಹೃದಯದ ಕಾಯಿಲೆ ಜೊತೆಗೆ ಪಾರ್ಶ್ವವಾಯುವಿನ ಅಪಾಯವೂ ಹೆಚ್ಚಾಗುತ್ತದೆ.
ಒಮ್ಮೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಅದನ್ನು ಕಂಟ್ರೋಲ್‌ಗೆ ತರಲು ಜೀವನದುದ್ದಕ್ಕೂ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ.
ಆರೋಗ್ಯಕರ ಜೀವನಶೈಲಿಯ ಜೊತೆಗೆ ಕೆಲವು ಮನೆಮದ್ದುಗಳ ಮೂಲಕವೂ ನೀವು ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಂಟ್ರೋಲ್‌ಗೆ ತರಬಹುದು.
ಅರ್ಜುನ ತೊಗಟೆ ಮತ್ತು ದಾಲ್ಚಿನ್ನಿ ಆಯುರ್ವೇದ ಗಿಡಮೂಲಿಕೆ ಮಸಾಲೆಗಳು ಕೊಲೆಸ್ಟ್ರಾಲ್‌ಗೆ ಪರಿಣಾಮಕಾರಿಯಾಗಿವೆ.
ಅರ್ಧ ಟೀ ಚಮಚ ಅರ್ಜುನ ತೊಗಟೆ, ಸ್ವಲ್ಪ ದಾಲ್ಚಿನ್ನಿ ಮತ್ತು ಒಂದು ಲೋಟ ನೀರು ತೆಗೆದುಕೊಳ್ಳಿರಿ.
ಒಂದು ಪಾತ್ರೆಯಲ್ಲಿ ಒಂದು ಲೋಟ ನೀರು ತುಂಬಿಸಿ. ಅದಕ್ಕೆ ಅರ್ಜುನ್ ತೊಗಟೆ ಮತ್ತು ದಾಲ್ಚಿನ್ನಿ ಸೇರಿಸಿ. ನೀರನ್ನು ಚೆನ್ನಾಗಿ ಕುದಿಸಿ. ಅದು ಅರ್ಧ ಕುದಿ ಬಂದಾಗ ಅದನ್ನು ಚೆನ್ನಾಗಿ ಶೋಧಿಸಿ. ಬಳಿಕ ಸೇವಿಸಿರಿ.