ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚಿನ ಸಕ್ಕರೆ , ಸೋಡಿಯಂ ಮತ್ತು ಪ್ರಿಸೆರ್ವೆಟಿವ್ ಗಳನ್ನು ಬಳಸಲಾಗುತ್ತದೆ. ಇದು ಉರಿಯೂತ, ತೂಕ ಹೆಚ್ಚಳ ಮುಂತಾದ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಸೋಡಾ, ಎನರ್ಜಿ ಡ್ರಿಂಕ್ಸ್ , ಮತ್ತು ಇತರ ಸಿಹಿ ಪಾನೀಯಗಳಲ್ಲಿ ಅಧಿಕ ಪ್ರಮಾಣ ಕ್ಯಾಲೋರಿ ಮತ್ತು ಸಕ್ಕರೆ ಇರುತ್ತದೆ. ಇದು ತೂಕ ಹೆಚ್ಚಳ, ಇನ್ಸುಲಿನ್ ಪ್ರತಿರೋಧಕ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಈ ವಸ್ತುಗಳಲ್ಲಿ ಸಾಮಾನ್ಯವಾಗಿ ಟ್ರಾನ್ಸ್ ಮತ್ತು ಸ್ಯಾಚ್ಯುರೆಟೆಡ್ ಫ್ಯಾಟ್ ಅಧಿಕವಾಗಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಹೃದ್ರೋಗದ ಅಪಾಯವನ್ನು ತಂದೊಡ್ಡಬಹುದು.
ಹೆಚ್ಚಿನ ಪ್ರಮಾಣದ ಉಪ್ಪನ್ನು ಸೇವಿಸುವುದು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದ್ರೋಗ ಮುಂತಾದ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಅತಿಯಾದ ಮದ್ಯ ಸೇವನೆ ಯಕೃತ್ತಿನ ಹಾನಿಯನ್ನು ಉಂಟು ಮಾಡುತ್ತದೆ. ಅಲ್ಲದೆ ಇದು ಕೆಲವು ಕ್ಯಾನ್ಸರ್ ಗೂ ಕಾರಣವಾಗುತ್ತವೆ.
ಈ ಆಹಾರಗಳಲ್ಲಿ ಸಾಮಾನ್ಯವಾಗಿ ಫೈಬರ್ ಕಡಿಮೆಯಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ.
ಚೀಸ್ ಕ್ರೀಂ ನಥಹ ಡೈರಿ ಉತ್ಪನ್ನಗಳಲ್ಲಿ ಸ್ಯಾಚ್ಯುರೆ ಟೆಡ್ ಫ್ಯಾಟ್ ಅಧಿಕವಾಗಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಅಪಾಯ ಇರುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದ್ರೋಗದ ಸಮಸ್ಯೆ ಕೂಡಾ ಕಾಡುತ್ತದೆ.
ರೆಡ್ ಮೀಟ್ ನಲ್ಲಿ ಕೂಡಾ ಅಧಿಕ ಸ್ಯಾಚ್ಯುರೆ ಟೆಡ್ ಫ್ಯಾಟ್, ಸೋಡಿಯಂ ಮತ್ತು ಪ್ರಿಸೆರ್ವೆಟಿವ್ ಇರುತ್ತದೆ. ಇದು ಹೃದ್ರೋಗ ಮತ್ತು ಕ್ಯಾನ್ಸರ್ ನಂಥಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಕೃತಕ ಸ್ವೀಟ್ ನರ್ ಗಳಲ್ಲಿ ಕ್ಯಾಲೋರಿ ಮಟ್ಟ ಕಡಿಮೆಯಿರುತ್ತದೆ. ಆದರೆ ಇದು ಇನ್ಸುಲಿನ್ ಪ್ರತಿರೋಧಕ ಮತ್ತು ಉರಿಯೂತಕ್ಕೆ ಕಾರಣವಾಗಬಹುದು.
ಈ ಆಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲು ಸಹಾಯ ಮಾಡುತ್ತವೆ. ತೂಕ ಹೆಚ್ಚಳಕ್ಕೂ ಇದು ಕಾರಣವಾಗುತ್ತದೆ.