ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ದೇಹದ ಎಲ್ಲಾ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತವೆ.
ಕೆಟ್ಟ ಆಹಾರ ಪದ್ಧತಿ ಮತ್ತು ಬದಲಾದ ಜೀವನಶೈಲಿಯಿಂದ ಅನೇಕರ ಮೂತ್ರಪಿಂಡಗಳು ಹಾಳಾಗುತ್ತಿವೆ.
ಮೂತ್ರಪಿಂಡ ಹಾನಿಗೊಳಗಾಗಲು ಪ್ರಾರಂಭಿಸಿದಾಗ ನಮ್ಮ ದೇಹವು ವಿವಿಧ ಸಂಕೇತ ನೀಡಲು ಪ್ರಾರಂಭಿಸುತ್ತದೆ.
ಊತವು ಮೂತ್ರಪಿಂಡದ ಹಾನಿಯ ಲಕ್ಷಣ ಆಗಿರಬಹುದು. ಮೂತ್ರಪಿಂಡದ ವೈಫಲ್ಯದಿಂದ ದೇಹದ ಅನೇಕ ಭಾಗಗಳಲ್ಲಿ ಉರಿಯೂತ ಸಂಭವಿಸುತ್ತದೆ.
ಸರಿಯಾದ ಸಮಯದಲ್ಲಿ ಇದನ್ನ ಅರ್ಥಮಾಡಿಕೊಳ್ಳುವುದು ದೊಡ್ಡ ಅಪಾಯವನ್ನ ತಪ್ಪಿಸಬಹುದು.
ಕಿಡ್ನಿ ಹಾನಿ ಮುಖದ ಮೇಲೆ ಊತವನ್ನ ಉಂಟುಮಾಡಬಹುದು. ಈ ಲಕ್ಷಣವನ್ನ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.
ಕೈಗಳಲ್ಲಿ ಊತ, ಬೆರಳುಗಳಲ್ಲಿ ಆಗಾಗ ನೋವು ಇದ್ದರೆ ಎಚ್ಚರಿಕೆಯಿಂದಿರಿ. ಏಕೆಂದರೆ ಇವು ಮೂತ್ರಪಿಂಡ ವೈಫಲ್ಯದ ಲಕ್ಷಣಗಳಾಗಿರಬಹುದು.