ಸಣ್ಣ ಮಕ್ಕಳು-ಹದಿಹರೆಯದವರಲ್ಲಿ ಕೂಡ ಕಿಡ್ನಿ ಸ್ಟೋನ್ ಸಮಸ್ಯೆ ಕಾಡುತ್ತಿದ್ದು, ಪೋಷಕರು ಹಾಗೂ ವೈದ್ಯರಿಗೆ ದೊಡ್ಡ ತಲೆನೋವಾಗಿದೆ.
ಕಿಡ್ನಿಸ್ಟೋನ್ ಸಮಸ್ಯೆಯಿಂದ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಹೊಟ್ಟೆ ನೋವು ಮತ್ತು ಮೂತ್ರ ವಿಸರ್ಜನೆ ಸಮಸ್ಯೆ ಬರಬಹುದು.
ಕಿಡ್ನಿ ಸ್ಟೋನ್ ಎನ್ನುವು ಖನಿಜಾಂಶ ಮತ್ತು ಉಪ್ಪು ಜತೆಯಾಗಿ ಜಮೆಯಾಗಿ ಕಠಿಣವಾದ ಹರಳಾಗುವುದು. ಕೆಲವು ಕಲ್ಲುಗಳು ಮೂತ್ರದ ಮೂಲಕ ಹೊರಗೆ ಹೋಗಬಹುದು.
ಇನ್ನು ಕೆಲವು ತುಂಬಾ ನೋವು ಉಂಟು ಮಾಡಿ, ಮೂತ್ರಕೋಶದ ಸೋಂಕಿಗೆ ಕಾರಣವಾಗಬಹುದು ಹಾಗೂ ಕಿಡ್ನಿಗೆ ಹಾನಿ ಉಂಟು ಮಾಡಬಹುದು.
ಮಕ್ಕಳಲ್ಲಿ ಮುಖ್ಯವಾಗಿ ನಾಲ್ಕು ವಿಧದ ಕಿಡ್ನಿ ಕಲ್ಲುಗಳು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ಕ್ಯಾಲ್ಸಿಯಂ ಕಲ್ಲು, ಯೂರಿಕ್ ಆಮ್ಲದ ಕಲ್ಲು, ಸ್ಟ್ರುವೈಟ್ ಕಲ್ಲುಗಳು ಮತ್ತು ಸಿಸ್ಟೈನ್ ಕಲ್ಲುಗಳು.
ಯಾವುದೇ ಅನುವಂಶೀಯ ಅಸ್ವಸ್ಥತೆ, ಕಿಡ್ನಿ ಕಲ್ಲಿನ ಕೌಟುಂಬಿಕ ಹಿನ್ನೆಲೆ ಮತ್ತು ಕೆಲವು ವೈದ್ಯಕೀಯ ಪರಿಸ್ಥಿತಿಯಿಂದ ಕಿಡ್ನಿ ಸ್ಟೋನ್ ಸಮಸ್ಯೆಗೆ ಒಳಗಾಗಬಹುದು.
ಮಕ್ಕಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆಯು ತೀರಾ ಅಪರೂಪವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.