ಕಿಡ್ನಿಯು ಸರಿಯಾಗಿ ಕೆಲಸ ಮಾಡದಿರುವಾಗ ರಕ್ತದಲ್ಲಿ ವಿಷಕಾರಿ ಅಂಶಗಳು & ಕಲ್ಮಷ ತುಂಬಿರುತ್ತದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಬಳಲಿಕೆ, ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ.
ಕಿಡ್ನಿಯನ್ನು ರಕ್ತವನ್ನು ಶುದ್ಧೀಕರಿಸದೆ ಇದ್ದ ಸಂದರ್ಭದಲ್ಲಿ ದೇಹದಿಂದ ವಿಷಕಾರಿ ಅಂಶಗಳು ರಕ್ತದ ಮೂಲಕ ಹೊರಗೆ ಹೋಗದೆ ಇರಬಹುದು.
ಇದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುವುದು. ಬೊಜ್ಜು ಮತ್ತು ದೀರ್ಘಕಾಲಿಕ ಕಿಡ್ನಿ ಸಮಸ್ಯೆಗೆ ನೇರ ಸಂಬಂಧವಿದೆ. ದೀರ್ಘಕಾಲದ ಕಿಡ್ನಿ ಕಾಯಿಲೆಯಿಂದ ನಿದ್ರೆಯ ಸಮಸ್ಯೆಯು ಕಾಡುತ್ತದೆ.
ರಕ್ತದಲ್ಲಿ ಸರಿಯಾದ ಪೋಷಕಾಂಶ & ಖನಿಜಾಂಶಗಳ ಸಮತೋಲನ ಕಾಪಾಡಲು ಕಿಡ್ನಿಗೆ ಸಾಧ್ಯವಾಗದಿರುವ ಕಾರಣ ಖನಿಜಾಂಶ & ಮೂಳೆಯ ಸಮಸ್ಯೆಗಳು, ಒಣ ಮತ್ತು ತುರಿಕೆಯ ಚರ್ಮದ ಸಮಸ್ಯೆ ಕಾಡಬಹುದು.
ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ ಆಗುವುದು ಕಿಡ್ನಿ ಕಾಯಿಲೆಯ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ.
ಪದೇ ಪದೇ ಮೂತ್ರ ವಿಸರ್ಜನೆ ಆಗುತ್ತಲಿದ್ದರೆ ಆಗ ನೀವು ಕಿಡ್ನಿ ಸಮಸ್ಯೆಯ ಬಗ್ಗೆ ಗಮನಹರಿಸುವುದು ಅತೀ ಅಗತ್ಯವಾಗಿರುತ್ತದೆ.
ಕಿಡ್ನಿ ಕಾಯಿಲೆ ಪ್ರಮುಖ ಲಕ್ಷಣವೆಂದರೆ ನೊರೆಯುಕ್ತ ಮೂತ್ರ ಬರುವುದು. ಮೂತ್ರದಲ್ಲಿ ಅತಿಯಾದ ನೊರೆ ಬಂದರೆ ಆಗ ಮೂತ್ರದಲ್ಲಿ ಪ್ರೋಟೀನ್ ಕೂಡ ಹೊರಗೆ ಹೋಗುತ್ತಿದೆ ಎಂದರ್ಥ.