ಅನೇಕ ಜನರು ತೂಕ ಇಳಿಕೆ ಮಾಡಿಕೊಳ್ಳುವ ಸಲುವಾಗಿ ಹೆಚ್ಚಾಗಿ ನಿಂಬೆ ಜ್ಯೂಸ್ ಕುಡಿಯುತ್ತಾರೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತು ಇಲ್ಲಿಗೆ ಸೂಕ್ತವಾಗುತ್ತದೆ.
ಹೆಚ್ಚು ನಿಂಬೆ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ತೀವ್ರ ಅಡ್ಡಪರಿಣಾಮಗಳನ್ನು ತಂದೊಡ್ಡುತ್ತವೆ.
ನಿಂಬೆ ಜ್ಯೂಸ್ ಹೆಚ್ಚಾಗಿ ಕುಡಿದರೆ ದಂತಕವಚ ಸವೆತ ಅಥವಾ ಹಲ್ಲಿನ ಕೊಳೆತಕ್ಕೆ ಕಾರಣವಾಗಬಹುದು
ಸಿಟ್ರಸ್ ಹಣ್ಣುಗಳು ಸಾಮಾನ್ಯವಾಗಿ ಮೈಗ್ರೇನ್ ಮತ್ತು ತಲೆನೋವುಗಳಿಗೆ ಕಾರಣವಾಗುತ್ತದೆ. ನಿಂಬೆಹಣ್ಣುಗಳು ಟೈರಮೈನ್ ಅನ್ನು ಉತ್ಪಾದಿಸುವ ಕಾರಣದಿಂದ ತಲೆನೋವು ಕಾಣಿಸಿಕೊಳ್ಳಬಹುದು.
ನಿಂಬೆ ಜ್ಯೂಸ್ ಹೆಚ್ಚಾಗಿ ಸೇವಿಸಿದರೆ ಹೊಟ್ಟೆಯ ಸಮಸ್ಯೆಗಳು ಮತ್ತು ಎದೆಯುರಿ ಉಲ್ಬಣಗೊಳ್ಳಬಹುದು.
ಸಿಟ್ರಸ್ ಹಣ್ಣುಗಳು ಬಾಯಿ ಹುಣ್ಣುಗಳಿಗೆ ಕಾರಣವಾಗುತ್ತವೆ. ನಿಂಬೆ ರಸವನ್ನು ಕುಡಿಯುವ ಮೊದಲು ಬಾಯಿ ಹುಣ್ಣು ಸಂಪೂರ್ಣವಾಗಿ ವಾಸಿಯಾಗುವವರೆಗೆ ಕಾಯುವುದು ಉತ್ತಮ.