ಪ್ರತಿದಿನ ಬೆಣ್ಣೆಹಣ್ಣು ತಿಂದ್ರೆ ನಿಮಗೆ ಈ ಆರೋಗ್ಯ ಸಮಸ್ಯೆಗಳು ಬರುವುದೇ ಇಲ್ಲ

Published by: Puttaraj K Alur | Nov 08, 2025

ಕಣ್ಣಿನ ಆರೋಗ್ಯ

ಬೆಣ್ಣೆ ಹಣ್ಣಿನಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್‌ನಂತಹ ಉತ್ಕರ್ಷಣ ನಿರೋಧಕಗಳು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಕಣ್ಣಿನ ಸಮಸ್ಯೆಗಳನ್ನ ತಡೆಯುತ್ತವೆ.

Published by: Puttaraj K Alur | Nov 08, 2025

ಚರ್ಮ ಮತ್ತು ಕೂದಲು

ಬೆಣ್ಣೆ ಹಣ್ಣು ಚರ್ಮಕ್ಕೆ ತೇವಾಂಶ ನೀಡುತ್ತದೆ, ಮೊಡವೆಗಳನ್ನ ತಡೆಯುತ್ತದೆ ಮತ್ತು ನೈಸರ್ಗಿಕ ಸೂರ್ಯನ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ. ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹ ಇದು ಸಹಕಾರಿ.

Published by: Puttaraj K Alur | Nov 08, 2025

ಮಿದುಳಿನ ಕಾರ್ಯಕ್ಷಮತೆ

ಬೆಣ್ಣೆ ಹಣ್ಣಿನಲ್ಲಿರುವ ಫೋಲೇಟ್, ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬುಗಳು ಮೆದುಳಿನ ಆರೋಗ್ಯವನ್ನ ಸುಧಾರಿಸುತ್ತವೆ ಮತ್ತು ಖಿನ್ನತೆಯ ಅಪಾಯ ಕಡಿಮೆ ಮಾಡುತ್ತವೆ.

Published by: Puttaraj K Alur | Nov 08, 2025

ಮೂಳೆಗಳ ಆರೋಗ್ಯ

ಬೆಣ್ಣೆ ಹಣ್ಣಿನಲ್ಲಿರುವ ವಿಟಮಿನ್ ಕೆ, ಮೆಗ್ನೀಷಿಯಂ ಮತ್ತು ಪೊಟ್ಯಾಸಿಯಮ್ ಎಲುಬುಗಳನ್ನ ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ.

Published by: Puttaraj K Alur | Nov 08, 2025

ಜೀರ್ಣಕ್ರಿಯೆ

ಬೆಣ್ಣೆ ಹಣ್ಣಿನಲ್ಲಿರುವ ಅಜೀರ್ಣ ಮತ್ತು ಕೆಟ್ಟ ಉಸಿರಾಟವನ್ನ ತಡೆಯಲು ಸಹಾಯ ಮಾಡುತ್ತದೆ. ಏಕೆಂದರೆ ಇದು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನ ತೊಡೆದುಹಾಕಲು ಸಹಾಯ ಮಾಡುವ ಗುಣ ಹೊಂದಿದೆ.

Published by: Puttaraj K Alur | Nov 08, 2025

ತೂಕ ನಿರ್ವಹಣೆ

ಬೆಣ್ಣೆ ಹಣ್ಣಿನಲ್ಲಿರುವ ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳು ತೂಕವನ್ನ ನಿರ್ವಹಿಸಲು ಸಹಾಯ ಮಾಡುತ್ತದೆ.

Published by: Puttaraj K Alur | Nov 08, 2025

ಚರ್ಮದ ಉರಿಯೂತ

ಅವಕಾಡೊದಲ್ಲಿ ವಿಟಮಿನ್ ಸಿ ಮತ್ತು ಇ ಸಮೃದ್ಧವಾಗಿದೆ. ಅಧಿಕ ಮಟ್ಟದ ಬೀಟಾ ಕ್ಯಾರೊಟಿನ್, ಬಿಸಿಲಿನ ಯುವಿ ಕಿರಣಗಳಿಂದ ಆಗುವಂತಹ ಚರ್ಮದ ಉರಿಯೂತವನ್ನ ಕಡಿಮೆ ಮಾಡುವುದು.

Published by: Puttaraj K Alur | Nov 08, 2025

VIEW ALL

Read Next Story