ಮೂತ್ರಪಿಂಡಗಳು ನಮ್ಮ ದೇಹದಲ್ಲಿ ರಕ್ತದಿಂದ ತ್ಯಾಜ್ಯವನ್ನು ಶೋಧಿಸಿ ಹೊರಹಾಕುವ ಕಾರ್ಯನಿರ್ವಹಿಸುತ್ತವೆ.
ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಸಿದ್ದರೆ ತ್ಯಾಜ್ಯ & ವಿಷಕಾರಿ ವಸ್ತುಗಳು ದೇಹದಲ್ಲಿ ಸಂಗ್ರಹವಾಗಿ ಗಂಭೀರ ಸಮಸ್ಯೆ ಉಂಟಾಗುತ್ತವೆ.
ಮೂತ್ರಪಿಂಡ (Kidney)ದ ಸಮಸ್ಯೆ ಅದರಲ್ಲೂ ಕ್ರೋನಿಕ್ ಕಿಡ್ನಿ ಕಾಯಿಲೆ (CKD)ಗೆ ತುತ್ತಾಗುವವರ ಸಂಖ್ಯೆ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ.
ಭಾರತದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳ ಸಂಖ್ಯೆ ಪ್ರತಿ ವರ್ಷ ಶೇ.10– 15ರಷ್ಟು ಹೆಚ್ಚುತ್ತಿದೆ ಎಂದು ವರದಿಗಳು ಹೇಳಿವೆ.
ಮೂತ್ರಪಿಂಡದ ವೈಫಲ್ಯದ ಸಾಮಾನ್ಯ ಲಕ್ಷಣಗಳೆಂದರೆ ಮೂತ್ರ ಉತ್ಪಾದನೆ ಕಡಿಮೆಯಾಗುವುದು, ಮೂತ್ರ ವಿಸರ್ಜನೆ ಆಗದೇ ಇರುವುದು.
ಕಾಲುಗಳು ಮತ್ತು ಪಾದಗಳಲ್ಲಿ ಊತ, ಆಯಾಸ, ವಾಕರಿಕೆ ಮತ್ತು ವಾಂತಿ ಮತ್ತು ಗೊಂದಲ ಸಹ ಕಿಡ್ನಿ ವೈಫಲ್ಯದ ಲಕ್ಷಣಗಳಾಗಿವೆ,
ಸರಿಯಾಗಿ ಹಸಿವಾಗದಿರುವುದು, ಉಸಿರಾಡಲು ತೊಂದರೆ, ಎದೆ ನೋವು ಅಥವಾ ಒತ್ತಡ, ಸ್ನಾಯು ಸೆಳೆತ ಮತ್ತು ಅಧಿಕ ರಕ್ತದೊತ್ತಡವೂ ಕಾಣಿಸಿಕೊಳ್ಳಬಹುದು.