ಚಿಕ್ಕ ವಯಸ್ಸಲ್ಲೇ ಹೃದಯದ ಸಮಸ್ಯೆ ಬರುತ್ತಿದೆ ಅಂದ್ರೆ ಅದರ ಲಕ್ಷಣಗಳನ್ನ ಮೊದಲೇ ತಿಳಿದುಕೊಂಡು ಎಚ್ಚೆತ್ತುಕೊಳ್ಳಬೇಕು.
ಹೃದಯಾಘಾತ ಸಮಸ್ಯೆಗೆ ಪ್ರಮುಖ ಕಾರಣವೆಂದರೆ ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ.
ಎದೆಯ ಮಧ್ಯ ಭಾಗ ಅಥವಾ ಎಡಗಡೆ ಒಂದು ರೀತಿಯ ನೋವು ಮತ್ತು ಅಸ್ವಸ್ಥತೆ ಕಂಡುಬರಬಹುದು.
ಕೆಲವರಿಗೆ ಎದೆಯಲ್ಲಿ ಒತ್ತಡ & ಎದೆ ಹಿಸುಕಿದ ಅನುಭವ ಪ್ರಮುಖ ಲಕ್ಷಣಗಳಾಗಿವೆ. ಹೀಗಾಗಿ ನೀವು ಸಕ್ಕರೆ ಸೇವನೆ ಬಿಡಬೇಕು.
ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಎದುರಾಗಿ ಜಾಸ್ತಿಯಾದರೆ ಹಾರ್ಟ್ ಅಟ್ಯಾಕ್ ಆಗುತ್ತದೆ. ಮಧ್ಯಪಾನ ಮತ್ತು ಧೂಮಪಾನದಿಂದ ದೂರವಿರಬೇಕು.
ನಿಮ್ಮ ಎಡಭಾಗದ ತೋಳು, ಬೆನ್ನು, ಕುತ್ತಿಗೆ, ದವಡೆ ಅಥವಾ ಹೊಟ್ಟೆಯ ಭಾಗದಲ್ಲಿ ನೋವು ಕಂಡುಬರುವುದು ಸಹ ಪ್ರಮುಖ ಲಕ್ಷಣ.
ಕೆಲವರಿಗೆ ಅಜೀರ್ಣತೆ ಸಮಸ್ಯೆ ಅಥವಾ ಸಾಮಾನ್ಯ ನೆಗಡಿ ಕೆಮ್ಮು ಇದ್ದಂತಹ ಸಂದರ್ಭದಲ್ಲಿ ಕೂಡ ವಾಕರಿಕೆ ಅಥವಾ ವಾಂತಿ ಜೊತೆಗೆ ತಲೆ ಸುತ್ತು ಕೂಡ ಬರುತ್ತದೆ.