ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಯಿಂದ ಇಂದು ಅನೇಕರಲ್ಲಿ ಕಿಡ್ನಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ದಿನದಿಂದ ದಿನಕ್ಕೆ ಅನೇಕರಲ್ಲಿ ಬಿಪಿ ಮತ್ತು ಮಧುಮೇಹದ ಜೊತೆಗೆ ಮೂತ್ರಪಿಂಡದ ಸಮಸ್ಯೆಯೂ ಹೆಚ್ಚುತ್ತಿದೆ.
ಮೂತ್ರಪಿಂಡ ಸಂಬಂಧಿತ ಸಮಸ್ಯೆ ಇದ್ದಾಗ ಕಂಡುಬರುವ ಮೊದಲ ಲಕ್ಷಣವೆಂದರೆ ಕೆಳ ಬೆನ್ನಿನಲ್ಲಿ ತೀವ್ರ ನೋವು ಕಾಣಿಸಿಕೊಳ್ಳುವುದು.
ಮೂತ್ರಕೋಶದಲ್ಲಿ ಉರಿಯೂತ ಹೆಚ್ಚಾಗುವುದು ಸಹ ಭವಿಷ್ಯದಲ್ಲಿ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ.
ಮೂತ್ರಪಿಂಡಗಳಲ್ಲಿ ಕಲ್ಲುಗಳಿದ್ದಾಗ ಅಂದರೆ ಕಿಡ್ನಿ ಸ್ಟೋನ್ ಆದಾಗ ಸೊಂಟದ ಸುತ್ತಲೂ ಊತ ಕಂಡು ಬರುತ್ತದೆ. ಪಕ್ಕೆಲುಬುಗಳ ಸುತ್ತಲೂ ನೋವಿರುತ್ತದೆ.
ಆಗಾಗ ವಾಕರಿಕೆ, ವಾಂತಿ ಮತ್ತು ಹಸಿವಾಗದಿರುವುದು ಸಹ ಕಿಡ್ನಿ ಸಮಸ್ಯೆಯ ಲಕ್ಷಣವಾಗಿರುತ್ತದೆ.
ಪಾದಗಳಲ್ಲಿ ಊತ, ಕಡಿಮೆ ಉಸಿರಾಟ, ನಿದ್ರಾಹೀನತೆ, ಅತಿಯಾದ ಅಥವಾ ಕಡಿಮೆ ಮೂತ್ರವಿಸರ್ಜನೆ ಮೂತ್ರಪಿಂಡದ ಸಮಸ್ಯೆಗಳ ಲಕ್ಷಣಗಳಾಗಿವೆ.
ಮೂತ್ರಪಿಂಡದ ಕಾರ್ಯನಿರ್ವಹಣೆಯಲ್ಲಿ ಯಾವುದೇ ಸಮಸ್ಯೆ ಇದ್ರೆ ತೀವ್ರ ಹೊಟ್ಟೆ ನೋವು ಬರುತ್ತದೆ. ಇದು ಮೂತ್ರಪಿಂಡ ವೈಫಲ್ಯದ ಸಂಕೇತ ಆಗಿರಬಹುದು.