ಜೀವನಶೈಲಿ

ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Puttaraj K Alur
Apr 18,2025

ಹೃದ್ರೋಗ

ಅಧಿಕ ತೂಕ ಮತ್ತು ಸ್ಥೂಲಕಾಯತೆಯು ಮಧುಮೇಹ, ಹೃದ್ರೋಗ, ಪಾರ್ಶ್ವವಾಯು ಮತ್ತು ಕೆಲವು ಕ್ಯಾನ್ಸರ್‌ಗಳಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಸ್ಥೂಲಕಾಯ ಸಮಸ್ಯೆ

2050ರ ಹೊತ್ತಿಗೆ ಭಾರತದಲ್ಲಿ 44 ಕೋಟಿ ಭಾರತೀಯರು ಸ್ಥೂಲಕಾಯ ಸಮಸ್ಯೆಯಿಂದ ಬಳಲಲಿದ್ದಾರೆಂದು ಲ್ಯಾನ್ಸೆಟ್‌ ಜರ್ನಲ್‌ ನಡೆಸಿದ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ನಿಂಬೆಹಣ್ಣಿನ ಜ್ಯೂಸ್‌

ವಿಟಮಿನ್ ʼಸಿʼ ಹೆಚ್ಚಾಗಿರುವ ನಿಂಬೆಹಣ್ಣಿನ ಜ್ಯೂಸ್‌ ಸೇವನೆಯಿಂದ ನೀವು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು.

ಡೈರಿ ಉತ್ಪನ್ನಗಳು

ನೀವು ಏನಾದರೂ ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದ ಡೈರಿ ಉತ್ಪನ್ನಗಳನ್ನು ಸೇವಿಸುವುದನ್ನ ಇಂದಿನಿಂದಲೇ ನಿಲ್ಲಿಸಬೇಕು.

ಜಂಕ್‌ ಫುಡ್‌

ಹೊಟ್ಟೆಯ ಬೊಜ್ಜು ಕರಗಿಸಬೇಕು ಎಂದರೆ ನೀವು ಜಂಕ್‌ ಫುಡ್‌ ಮತ್ತು ಕರಿದ ಆಹಾರಗಳಿಂದ ದೂರವಿರಬೇಕು.

ವ್ಯಾಯಾಮ

ತೂಕ ಇಳಿಸಿಕೊಳ್ಳಲು ನೀವು ಪ್ರತಿದಿನವೂ ತಪ್ಪದೇ ವ್ಯಾಯಾಮ ಮಾಡಬೇಕು. ಬೆಳಗಿನ ನಡಿಗೆಯನ್ನು ರೂಢಿಸಿಕೊಂಡರೆ ಆರೋಗ್ಯಕ್ಕೆ ಉತ್ತಮ.

ತರಕಾರಿ ಮತ್ತು ಹಣ್ಣು

ಅಧಿಕ ತೂಕದಿಂದ ಮುಕ್ತಿ ಹೊಂದಲು ನೀವು ಹೆಚ್ಚೆಚ್ಚು ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು.

VIEW ALL

Read Next Story