ಅತ್ಯಂತ ಅಪಾಯಕಾರಿ

ಮೂತ್ರಪಿಂಡದ ಕಾಯಿಲೆಗ ಅತ್ಯಂತ ಅಪಾಯಕಾರಿಯಾಗಿದ್ದು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು.

Puttaraj K Alur
Jan 25,2025

ಆರಂಭಿಕ ಹಂತ

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಆರಂಭಿಕ ಹಂತದಲ್ಲಿ ಕೆಲವು ರೋಗಲಕ್ಷಣಗಳನ್ನು ಹೊಂದಿರಬಹುದು.

ಹಸಿವಿನ ನಷ್ಟ

ಹಸಿವು ಆಗದಿರುವುದು ಅಥವಾ ಹಸಿವಿನ ನಷ್ಟ ಮತ್ತು ವಾಕರಿಕೆ ಉಂಟಾಗುವುದು ಕಿಡ್ನಿ ವೈಫಲ್ಯದ ಸಂಕೇತವಾಗಿದೆ.

ಆಯಾಸ

ಆಯಾಸ, ದೇಹದಲ್ಲಿ ಶಕ್ತಿ ಕ್ಷೀಣಿಸುತ್ತಾ ಬರುವುದು ಮತ್ತು ರಾತ್ರಿ ವೇಳೆಯಲ್ಲಿ ನಿದ್ರೆ ಬಾರದಿರುವುದು.

ಮೂತ್ರ ವಿಸರ್ಜನೆ

ಹೆಚ್ಚಾಗಿ ಮೂತ್ರ ವಿಸರ್ಜನೆ ಅಥವಾ ಕಡಿಮೆ ಮೂತ್ರ ವಿಸರ್ಜನೆ ಮಾಡುವುದು. ಸ್ನಾಯು ಸೆಳೆತ, ಪಾದಗಳು ಮತ್ತು ಮೊಣಕಾಲುಗಳ ಊತ.

ಅಧಿಕ ರಕ್ತದೊತ್ತಡ

ಚರ್ಮವು ಶುಷ್ಕವಾಗಿ ತುರಿಕೆಯಾಗುವುದು ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಿಸಲು ಕಷ್ಟವಾಗುವುದು.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ, ಶ್ವಾಸಕೋಶದಲ್ಲಿ ನೋವು, ಎದೆ ನೋವು ಮತ್ತು ಹೃದಯದ ಒಳ ಪದರದ ಸುತ್ತಲೂ ದ್ರವ ನಿರ್ಮಾಣವಾಗುವುದು.

ಮೂತ್ರಪಿಂಡದ ಜಾಗದಲ್ಲಿ ನೋವು

ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದರೆ ಕಾಲುಗಳು ಉಬ್ಬಿಕೊಳ್ಳುತ್ತವೆ ಮತ್ತು ಮೂತ್ರಪಿಂಡದ ಜಾಗದಲ್ಲಿ ನೋವು ಕಾಣಿಸಿಕೊಳ್ಳುವುದು.

VIEW ALL

Read Next Story