ನುಗ್ಗೆಕಾಯಿಯಲ್ಲಿ ಅನೇಕ ಪೋಷಕಾಂಶಗಳಿದ್ದು, ನಿಯಮಿತವಾಗಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು.
ನುಗ್ಗೆಕಾಯಿಯಲ್ಲಿ ವಿಟಮಿನ್ ʼಸಿʼ ಉತ್ತಮ ಪ್ರಮಾಣದಲ್ಲಿದ್ದು, ಜ್ವರ, ಗಂಟಲ ಬೇನೆ, ಕೆರೆತ, ಶೀತ ಮೊದಲಾದ ಕಾಯಿಲೆಗಳನ್ನು ನಿಯಂತ್ರಿಸುತ್ತದೆ.
ನುಗ್ಗೆಕಾಯಿಯು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಹೊಟ್ಟೆಗೆ ಸಂಬಂಧಿಸಿ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
ನುಗ್ಗೆಕಾಯಿ ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನ ನಿವಾರಣೆ ಮಾಡುತ್ತದೆ.
ಪುರುಷರ ವೀರ್ಯಾಣು ಸಂಖ್ಯೆ ಹೆಚ್ಚಾಗಬೇಕಾದರೆ, ಫರ್ಟಿಲಿಟಿ ಉತ್ತಮವಾಗಿರಬೇಕಾದರೆ ನುಗ್ಗೆಕಾಯಿ ಸೇವಿಸಬೇಕು.
ನಿಯಮಿತವಾಗಿ ನುಗ್ಗೆಕಾಯಿ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.
ನುಗ್ಗೆಕಾಯಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.