ಪ್ರಾಚೀನ ಕಾಲದಿಂದಲೂ ನೆಲ್ಲಿಕಾಯಿ ಪುಡಿಯನ್ನು ಕೂದಲಿನ ಆರೈಕೆಗಾಗಿ ಬಳಸಲಾಗುತ್ತಿದೆ.
ಕೂದಲಿಗೆ ನೆಲ್ಲಿಕಾಯಿ ಪುಡಿ ಹಚ್ಚುವುದರಿಂದ ನೀವು ಹಲವಾರು ಲಾಭಗಳನ್ನ ಪಡೆಯುತ್ತೀರಿ.
ಆಯುರ್ವೇದ ಹೇರ್ ಮಾಸ್ಕ್‌ಗಳಲ್ಲಿಯೂ ನೆಲ್ಲಿಕಾಯಿ ಪುಡಿಯನ್ನು ಬಳಸಲಾಗಿರುತ್ತದೆ.
ನೆಲ್ಲಿಕಾಯಿ ಪುಡಿಯು ಕೂದಲಿನ ಬೆಳವಣಿಗೆ ಪೋಷಿಸುವುದರ ಜೊತೆಗೆ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.
ನೆಲ್ಲಿಕಾಯಿ ಕೂದಲಿನ ಆರೋಗ್ಯವನ್ನು ರಕ್ಷಿಸುವುದಲ್ಲದೆ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಒಂದು ಕಪ್ ತೆಂಗಿನ ಎಣ್ಣೆಗೆ ಎರಡು ಟೀ ಚಮಚ ಆಮ್ಲಾ ಎಣ್ಣೆ ಸೇರಿಸಿ ಕೊಂಚ ಬಿಸಿ ಮಾಡಿ ಕೂದಲಿಗೆ ಹಚ್ಚಬೇಕು.
ಹೀಗೆ ಮಾಡುವುದರಿಂದ ನಿಮ್ಮ ಕೂದಲು ಬುಡದಿಂದಲೇ ಬಲಿಷ್ಠವಾಗುವುದರ ಜೊತೆಗೆ ಫಳ ಫಳ ಹೊಳೆಯುತ್ತವೆ.
ನೆಲ್ಲಿಕಾಯಿ ಪುಡಿಯು ತ್ವಚೆಗೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.