ಮೂಲವ್ಯಾಧಿ ಅಥವಾ ಪೈಲ್ಸ್ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಬಹುಮುಖ್ಯ ಮಾಹಿತಿ

Published by: Puttaraj K Alur | May 23, 2025

ಹೆಮೆರಾಯ್ಡ್

ಹೆಮೆರಾಯ್ಡ್ ಅಥವಾ ಮೊಳೆರೋಗ ಎಂತಲೂ ಕರೆಯುವ ಈ ಕಾಯಿಲೆಯ ಹಿಂಸೆ ಅನುಭವಿಸಿದವರಿಗೆ ಮಾತ್ರ ಗೊತ್ತು.

Published by: Puttaraj K Alur | May 23, 2025

ರಕ್ತನಾಳಗಳ ಸೋಂಕು

ಪೈಲ್ಸ್‌ ಇದ್ದವರಿಗೆ ಗುದನಾಳದ ಒಳಪದರದಲ್ಲಿರುವ ರಕ್ತನಾಳಗಳು ಸೋಂಕಿಗೊಳಗಾಗಿ ಉಬ್ಬಿಕೊಂಡು ಮಲವಿಸರ್ಜನೆಯ ವೇಳೆ ಒತ್ತಲ್ಪಟ್ಟು ಬಿರಿದು ರಕ್ತ ಒಸರುತ್ತದೆ.

Published by: Puttaraj K Alur | May 23, 2025

ನೋವಿನ ಗುಳ್ಳೆ

ಇದಲ್ಲದೆ ಗುದದ್ವಾರದಲ್ಲಿ ಚರ್ಮದ ನೋವಿನ ಗುಳ್ಳೆ ಕಾಣಿಸಿಕೊಳ್ಳುತ್ತದೆ. ಇದು ಮಲವಿಸರ್ಜನೆ ಮಾಡುವಾಗ ನೋವನ್ನು ಉಂಟುಮಾಡುತ್ತದೆ.

Published by: Puttaraj K Alur | May 23, 2025

ಫಿಸ್ಟುಲಾ

ಕೆಲವರಿಗೆ ಗುದದ್ವಾರದಲ್ಲಿ ಸ್ವಲ್ಪ ಹೊರಗಡೆ ಭಾಗದಲ್ಲಿ ಪೈಲ್ಸ್ ಉಂಟಾದರೆ ಇತರರಿಗೆ ಗುದದ್ವಾರದ ಒಳಗೆ ಪೈಲ್ಸ್ ಸಮಸ್ಯೆ (ಫಿಸ್ಟುಲಾ) ಕಂಡುಬರುತ್ತದೆ.

Published by: Puttaraj K Alur | May 23, 2025

ಮಲಬದ್ಧತೆ

ಆರೋಗ್ಯ ತಜ್ಞರ ಪ್ರಕಾರ ಮೂಲವ್ಯಾಧಿಗೆ ಬಹು ಮುಖ್ಯ ಕಾರಣವೆಂದರೆ ಮಲಬದ್ಧತೆ. ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತು ಕೆಲಸ ಮಾಡುವವರಿಗೆ ಈ ಮೂಲವ್ಯಾಧಿ ಕಂಡುಬರುತ್ತದೆ.

Published by: Puttaraj K Alur | May 23, 2025

ದೈಹಿಕ ಚಟುವಟಿಕೆ

ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗದಿರುವ ಜನರಿಗೆ ಈ ಸಮಸ್ಯೆ ಕಾಡುತ್ತದೆ. ಇದರಿಂದ ಕೆಲವೊಮ್ಮೆ ಕುಳಿತುಕೊಳ್ಳಲು ಮತ್ತು ಮಲಗಲು ಕಷ್ಟವಾಗುತ್ತದೆ.

Published by: Puttaraj K Alur | May 23, 2025

ಜೀವನಶೈಲಿ

ಅನುವಂಶಿಕ ಕಾರಣಗಳಿಂದ ಹಿಡಿದು ಮಲಬದ್ಧತೆ, ಕೆಲವು ಔಷಧಿಗಳ ಅಡ್ಡಪರಿಣಾಮಗಳು, ಜೀವನಶೈಲಿ ಮುಂತಾದವುಗಳಿಂದ ಮೂಲವ್ಯಾಧಿ ಎದುರಾಗಬಹುದು.

Published by: Puttaraj K Alur | May 23, 2025

VIEW ALL

Read Next Story