ತೆಂಗಿನ ನೀರಿನಲ್ಲಿ ಫೇಸ್ ಐಸ್ ಕ್ಯೂಬ್’ನ್ನು ತಯಾರಿಸಿ, ಅದನ್ನು ದೈನಂದಿನ ರೀತಿಯಲ್ಲಿ ಬಳಕೆ ಮಾಡಿದರೆ ಕಪ್ಪು ವರ್ತುಲಗಳು ಮಾಯವಾಗುತ್ತವೆ.
ಇದು ನಿಮ್ಮ ತ್ವಚೆಯನ್ನು ಆಳವಾಗಿ ಪೋಷಿಸುತ್ತದೆ, ಇದರಿಂದಾಗಿ ನಿಮ್ಮ ಚರ್ಮವು ಪ್ರತಿದಿನ ಕಾಂತಿಯುತವಾಗಿ ಮತ್ತು ತಾಜಾವಾಗಿ ಕಾಣುತ್ತದೆ.
ತೆಂಗಿನ ನೀರು ನಿಮ್ಮ ಮೈಬಣ್ಣವನ್ನು ಸುಧಾರಿಸುತ್ತದೆ. ಇದು ನಿಮಗೆ ಉತ್ತಮವಾದ ಚರ್ಮವನ್ನು ನೀಡುತ್ತದೆ.
ತೆಂಗಿನ ನೀರನ್ನು ಫೇಸ್ ಐಸ್ ಕ್ಯೂಬ್’ಗಳಾಗಿ ಮಾಡಿ ಮುಖಕ್ಕೆ ಪ್ರತೀದಿನ ಹಚ್ಚಿ, ಒಂದೇ ವಾರದಲ್ಲಿ ನಿಮಗೆ ಫಲಿತಾಂಶ ಸಿಗುವುದು.