ಆಯಾಸ ಗಮನದ ಕೊರತೆ ಮೂಡ್ ಸ್ವಿಂಗ್ಸ್ ತೂಕದಲ್ಲಿ ಏರಿಳಿತ
ದೀರ್ಘಕಾಲ ಹಾಗೂ ದಣಿವಾದ ದಿನವಾಗಿದ್ದರೆ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿಕೊಂಡರೆ ಅದು ನಿಮ್ಮನ್ನು ರಿಲ್ಯಾಕ್ಸ್ ಅನ್ನಾಗಿ ಮಾಡುತ್ತದೆ. ಅಲ್ಲದೆ, ನಿದ್ದೆಗೆ ಪ್ರೇರೇಪಿಸುತ್ತದೆ.
ನಿಮ್ಮ ದೇಹ, ಮನಸ್ಸನ್ನು ಶಾಂತವಾಗಿಡಲು ಮಸಾಜ್ ಥೆರಪಿ ಉತ್ತಮ ವಿಧಾನ. ರಾತ್ರಿಯ ವೇಳೆ ಮಸಾಜ್ ಮಾಡಿಸಿಕೊಂಡರೆ ನೋವು, ಆತಂಕ ಮತ್ತು ಖಿನ್ನತೆಯು ಕಡಿಮೆಯಾಗುತ್ತದೆ.
ತಂಪಾದ ಕೊಠಡಿಯಲ್ಲಿ ಮಲಗಿದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಿಮ್ಮ ಒತ್ತಡ ಕಡಿಮೆ ಆಗುತ್ತದೆ.
ಮಲಗುವ ವೇಳೆಯನ್ನು ಬದಲಿಸಬೇಡಿ, ಒಂದು ನಿರ್ದಿಷ್ಟ ಸಮಯಕ್ಕೆ ಮಲಗಿ. ಮಲಗುವ ಅರ್ಧಗಂಟೆ ಮೊದಲು, ಯಾವ ಚಿಂತೆ, ಭಯ, ಕೋಪ, ದುಃಖದ ವಿಚಾರಗಳ ಬಗ್ಗೆ ಗಮನ ಕೊಡಬೇಡಿ.
ಮನಸ್ಸು ರಿಲ್ಯಾಕ್ಸ್ ಆಗುವಂತಹ ಚಟುವಟಿಕೆಗಳನ್ನು ಮಾಡಿ. ಉದಾಹರಣೆಗೆ ಮಧುರ ಸಂಗೀತವನ್ನು ಆಲಿಸುವುದು, ಇಷ್ಟವಾದ ವಿಷಯದ ಬಗ್ಗೆ ಪುಸ್ತಕವನ್ನು ಓದುವುದು . ಮನೆಯವರೊಂದಿಗೆ ಸರಸ ಸಂಭಾಷಣೆ, ದೇವರ ಧ್ಯಾನ - ಜಪ ಮಾಡುವುದು ಮಾಡುವುದು ಇತ್ಯಾದಿ.
ರಾತ್ರಿ ಮಲಗುವ ಮುನ್ನ ಸ್ವಲ್ಪ ಹರ್ಬಲ್ ಚಹಾ ಕುಡಿಯಿರಿ. ಇದರಿಂದ ನಿದ್ದೆ ಹೋಗುವ ಸಮಯ ಕಡಿಮೆಯಾಗುವುದಲ್ಲದೆ ನಿಮ್ಮ ದೇಹವನ್ನು ಉಲ್ಲಾಸಿತಗೊಳಿಸುತ್ತದೆ. ಇನ್ನು, ಹರ್ಬಲ್ ಚಹಾ ಬದಲು ಪ್ಯಾಷನ್ ಫ್ರಲವರ್ ಟೀ ಅಥವಾ ಕ್ಯಾಮೊಮೈಲ್ ಚಹಾವನ್ನೂ ಕುಡಿಯಬಹುದು
ರಾತ್ರಿಹೊತ್ತು ನಿದ್ದೆಗೆ ಹೋಗುವ ಮುನ್ನ ನಿಕೋಟಿನ್, ಕೆಫೀನ್ ಹಾಗೂ ಆಲ್ಕೋಹಾಲ್ ( ಮದ್ಯಪಾನ ) ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ.