ಚಳಿಗಾಲದಲ್ಲಿ ಒಂದು ಕಪ್ ಬಿಸಿ ಚಹಾ ಕುಡಿದರೆ ಸಖತ್ ಮಜಾ ಸಿಗುತ್ತದೆ ಎನ್ನುವವರು ಅನೇಕ ಜನರಿದ್ದಾರೆ. ಆದರೆ ಮಜಾ ಜೊತೆಗೆ ಆರೋಗ್ಯವನ್ನೂ ಪಡೆಯಬೇಕೆಂದರೆ, ಸಕ್ಕರೆ ಬದಲು ಬೆಲ್ಲದ ಟೀ ಕುಡಿಯಿರಿ.
ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೋಲಿಕ್ ಆಮ್ಲ ಮತ್ತು ಕಬ್ಬಿಣದಂತಹ ಅಂಶಗಳು ಬೆಲ್ಲದಲ್ಲಿ ಕಂಡುಬರುತ್ತವೆ. ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಬೆಲ್ಲದಿಂದ ತಯಾರಿಸಿದ ಟೀ ಕುಡಿಯುವುದರಿಂದ ಮೈಗ್ರೇನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರು ಬೆಲ್ಲದ ಚಹಾವನ್ನು ಕುಡಿಯಬಹುದು. ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ.
ಬೆಲ್ಲವು ಜೀರ್ಣಕ್ರಿಯೆಗೆ ಬಹಳ ಪ್ರಯೋಜನಕಾರಿ. ಸಕ್ಕರೆಗೆ ಹೋಲಿಸಿದರೆ ಬೆಲ್ಲದಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ.
ಮೊಡವೆಗಳ ಸಮಸ್ಯೆಗೆ ಒಂದು ಕಾರಣವೆಂದರೆ ಅತಿಯಾದ ಪ್ರಮಾಣದಲ್ಲಿ ಸಕ್ಕರೆಯ ಬಳಕೆ. ಆದರೆ ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸುವುದರಿಂದ ನಿಮ್ಮ ಮುಖದ ಮೇಲಿನ ಮೊಡವೆಗಳು ಮತ್ತು ಕಪ್ಪು ಕಲೆಗಳಿಂದ ಪರಿಹಾರವನ್ನು ಪಡೆಯಬಹುದು.
ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಸಾಮಾನ್ಯ. ಶೀತದ ಸಮಸ್ಯೆಯನ್ನು ನಿವಾರಿಸಲು, ನೀವು ಬೆಲ್ಲದ ಚಹಾವನ್ನು ಸೇವಿಸಬಹುದು.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.