ನಮ್ಮ ಸುತ್ತ ಮುತ್ತ ಅನೇಕ ಬಗೆಯ ಹೂವುಗಳಿವೆ. ಇವುಗಳಲ್ಲಿ ಕೆಲವು ಹೂವುಗಳು ನಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಈ ಹೂವು ಅನೇಕ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಇದು ಆರೋಗ್ಯ ಮತ್ತು ತ್ವಚೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನಿವಾರಿಸುತ್ತದೆ.
ಮಲ್ಲಿಗೆ ಹೂವು ಮತ್ತು ಎಲೆಯ ರಸವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ. ಇದು ದೇಹವನ್ನು ಡಿಟಾಕ್ಸ್ ಮಾಡುವಲ್ಲಿ ಸಹಾ ಮಾಡುತ್ತದೆ.
ಮಲ್ಲಿಗೆ ಹೂವಿನ ಚಹಾ ಸೇವಿಸುವುದರಿಂದ ಒತ್ತಡ ನಿವಾರಣೆಯಾಗುವುದು.
ಮಲ್ಲಿಗೆಯಲ್ಲಿ ಆಂಟಿ ಆಕ್ಸಿಡೆಂಟ್ ಹೇರಳವಾಗಿರುತ್ತದೆ. ಇದರ ಹೂವಿನ ಚಹಾ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಈ ಹೂವಿನ ರಸ ತ್ವಚೆಗೆ ಪ್ರಯೋಜನಕಾರಿಯಾಗಿದೆ. ಇದು ತ್ವಚೆಯನ್ನು ಮಾಯಿಶ್ಚರೈಸ್ ಮಾಡಲು ಸಹಾಯ ಮಾಡುತ್ತದೆ.
ಮುಖದಲ್ಲಿ ಕಲೆಗಳಿದ್ದರೆ ಮಲ್ಲಿಗೆ ಹೂವನ್ನು ಬಳಸಬಹುದು. ಇದು ಕಲೆಗಳನ್ನು ತೊಡೆದು ಹಾಕುವಲ್ಲಿ ಸಹಾಯ ಮಾಡುತ್ತದೆ.
ಗಾಯಗಳಾಗಿದ್ದರೆ ಮಲ್ಲಿಗೆ ಹೂವಿನ ಪೇಸ್ಟ್ ಹಚ್ಚುವುದರಿಂದ ಗಾಯ ಮಾಯವಾಗುವುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.