ಪುರುಷರೇ ಕೆಲ ಕೆಟ್ಟ ಅಭ್ಯಾಸಗಳೆ ನಿಮ್ಮ ಶತ್ರು

ಪುರುಷರೇ ನಿಮ್ಮ ಕೆಲವು ಕೆಟ್ಟ ಅಭ್ಯಾಸಗಳೆ ನಿಮ್ಮ ಶತ್ರುಗಳು. ಹೌದು, ಕೆಲವು ತಪ್ಪು ಅಭ್ಯಾಸಗಳು ನಿಮ್ಮ ವೀರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

Channabasava A Kashinakunti
Jan 25,2023

ಅತಿಯಾದ ಒತ್ತಡ ಮತ್ತು ತಪ್ಪಾದ ಜೀವನಶೈಲಿ

ಅತಿಯಾದ ಒತ್ತಡ ಮತ್ತು ತಪ್ಪಾದ ಜೀವನಶೈಲಿಯಿಂದಾಗಿ, ಪುರುಷರ ಫಲವತ್ತತೆಯ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ನಿಮ್ಮ ಕೆಲವು ಈ ಅಭ್ಯಾಸಗಳನ್ನು ಇಂದೇ ಬಿಡಿ..

ಹೆಚ್ಚು ಸಿಗರೇಟ್ ಸೇದುವುದು!

ಹೆಚ್ಚು ಸಿಗರೇಟ್ ಸೇದುವುದು ಪುರುಷರ ವೀರ್ಯಾಣುಗಳ ಮೇಲೆ ತುಂಬಿ ಕೆಟ್ಟ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಈ ಸಿಗರೇಟ್ ಸೇದುವ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ.

ಮದ್ಯಪಾನ, ತಂಬಾಕು ಸೇವನೆ

ಮದ್ಯಪಾನ, ತಂಬಾಕು ಸೇವನೆ ಪುರುಷರಿಗೆ ಹಾನಿಕಾರಕ. ಅತಿಯಾದ ಆಲ್ಕೊಹಾಲ್ ಸೇವನೆಯು ಟೆಸ್ಟೋಸ್ಟೆರಾನ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿಮ್ಮ ವೀರ್ಯಾಣು ಸಂಖ್ಯೆ ಮೇಲೂ ಪರಿಣಾಮ ಬೀರುತ್ತದೆ.

ರಾತ್ರಿ ತಡವಾಗಿ ಮಲಗುವುದು

ರಾತ್ರಿ ತಡವಾಗಿ ಮಲಗುವುದರಿಂದ ಒತ್ತಡ ಮತ್ತು ಬೊಜ್ಜಿನ ಸಮಸ್ಯೆಗಳು ಕಾಡುತ್ತವೆ. ಇದರಿಂದಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಬಹುದು. ಅದಕ್ಕಾಗಿಯೇ ತಡರಾತ್ರಿಯಲ್ಲಿ ಮಲಗುವ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ.

ವ್ಯಾಯಾಮ ದಿಂದ ಬೊಜ್ಜು ಸಮಸ್ಯೆ

ವ್ಯಾಯಾಮ ಮಾಡದಿರುವುದರಿಂದ ಬೊಜ್ಜಿನ ಸಮಸ್ಯೆ ಎದುರಿಸಬೇಕಾಗಬಹುದು. ಹಾಗೆ, ಸ್ಥೂಲಕಾಯತೆಯಿಂದಾಗಿ, ನಿಮ್ಮ ವೀರ್ಯದ ಚಲನಶೀಲತೆ ನಿಧಾನಗೊಳ್ಳುತ್ತದೆ. ಅದಕ್ಕಾಗಿಯೇ ಪುರುಷರು ಪ್ರತಿದಿನ ವ್ಯಾಯಾಮ ಮಾಡಬೇಕು.

ಒತ್ತಡಕ್ಕೆ ಒಳಗಾಗುವುದು

ನೀವೂ ಸಹ ಆಗಾಗ ಒತ್ತಡಕ್ಕೆ ಒಳಗಾಗುತ್ತೀರಾ. ಆದ್ದರಿಂದ ಹುಷಾರಾಗಿರಿ ಏಕೆಂದರೆ ಪುರುಷರಲ್ಲಿನ ಒತ್ತಡದಿಂದ ವೀರ್ಯಾಣುಗಳ ಸಂಖ್ಯೆಯೂ ಕಡಿಮೆಯಾಗಬಹುದು.ಆದ್ದರಿಂದ ಇಂದಿನಿಂದಲೇ ಸಂತೋಷವಾಗಿರಲು ಪ್ರಯತ್ನಿಸಿ ಮತ್ತು ಒತ್ತಡದಿಂದ ದೂರವಿರಿ.

VIEW ALL

Read Next Story