ರಕ್ತನಾಳಗಳಲ್ಲಿ ಸಂಗ್ರಹ ಕೆಟ್ಟ ಕೊಲೆಸ್ಟ್ರಾಲ್

ಹೃದ್ರೋಗಿಗಳಿಗೆ ಯಾವುದಾದರೊಂದು ಸಂಗತಿಯಿಂದ ಹೆಚ್ಚು ಅಪಾಯವಿದೆ ಎಂದರೆ, ಅದು ಅವರ ರಕ್ತನಾಳಗಳಲ್ಲಿ ಸಂಗ್ರಹವಾಗುವ ಕೆಟ್ಟ ಕೊಲೆಸ್ಟ್ರಾಲ್. ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇರುವುದನ್ನು ಕಂಡುಹಿಡಿಯಲು, ನೀವು ಮೊದಲು ಲಿಪಿಡ್ ಪ್ರೊಫೈಲ್ ಪರೀಕ್ಷೆಗೆ ಒಳಗಾಗಬೇಕು

Channabasava A Kashinakunti
Jan 29,2023

ಕೆಟ್ಟ ಕೊಲೆಸ್ಟ್ರಾಲ್ ಗೆ ಮನೆ ಮದ್ದು

ಅಪಾಯವು ಹೆಚ್ಚಿದ್ದರೆ, ಅದನ್ನು ಕಡಿಮೆ ಮಾಡಲು, ಮನೆಯಲ್ಲಿ ಇರುವ ಕೆಲ ಆಯುರ್ವೇದ ವಸ್ತುಗಳನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾವ ಆಯುರ್ವೇದದ ಸಂಗತಿಗಳ ಸಹಾಯದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಕೆಟ್ಟ ಕೊಲೆಸ್ಟ್ರಾಲ್ ಗೆ ನೆಲ್ಲಿಕಾಯಿ

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ವಿಪರೀತವಾಗಿ ಹೆಚ್ಚಾದರೆ, ನೀವು ನೆಲ್ಲಿಕಾಯಿಯನ್ನು ಸೇವಿಸಬಹುದು. ಇದಕ್ಕಾಗಿ ನೀವು ಬೆಟ್ಟದ ನೆಲ್ಲಿಕಾಯಿಯನ್ನು ನೇರವಾಗಿ ತಿನ್ನಬಹುದು, ಅಥವಾ ಜ್ಯೂಸ್, ಪುಡಿ ಮತ್ತು ಟ್ಯಾಬ್ಲೆಟ್ ರೂಪದಲ್ಲಿ ಬಳಸಬಹುದು.

ಅರ್ಜುನ್‌ ಗಿಡದ ತೊಗಟೆ

ಅರ್ಜುನ ಹಣ್ಣನ್ನು ನೀವು ಹಲವು ಬಾರಿ ತಿಂದಿರಬೇಕು, ಆದರೆ ಒಮ್ಮೆ ಅರ್ಜುನ್‌ ಗಿಡದ ತೊಗಟೆಯನ್ನು ಪ್ರಯತ್ನಿಸಿ ನೋಡಿ. ಇದನ್ನು ಹಾಲಿನಲ್ಲಿ ಬೆರೆಸಿ ಪ್ರತಿದಿನ ಕುಡಿಯುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಹೃದ್ರೋಗಿಗಳಿಗೆ ಇದನ್ನು ಹೆಚ್ಚಾಗಿ ಸೇವಿಸಲು ಸಲಹೆ ನೀಡಲಾಗುತ್ತದೆ.

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಗೆ ಬೆಳ್ಳುಳ್ಳಿ

ಬೆಳ್ಳುಳ್ಳಿ ಒಂದು ವಿಧದ ಸಾಂಬಾರ ಪದಾರ್ಥವಾಗಿದ್ದು, ನಾವು ಹಲವಾರು ರೆಸಿಪಿಗಳ ರುಚಿಯನ್ನು ಹೆಚ್ಚಿಸಲು ಬಳಸುತ್ತೇವೆ, ಪ್ರತಿದಿನ ಇದರ 2 ರಿಂದ 3 ಕುಡಿಗಳನ್ನು ತಿಂದರೆ ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ದೂರಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಶುಂಠಿ

ಶುಂಠಿಯ ರುಚಿ ಕಹಿಯಾಗಿದ್ದರೂ, ದಿನನಿತ್ಯ ಹಸಿಯಾಗಿ ಜಗಿಯುತ್ತಿದ್ದರೆ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ. ಇದಲ್ಲದೇ ಶುಂಠಿಯಿಂದ ತಯಾರಿಸಿದ ಹರ್ಬಲ್ ಟೀ ಕುಡಿದರೆ ಅದರಿಂದಲೂ ಕೂಡ ಪ್ರಯೋಜನವಾಗುತ್ತದೆ.

ಸೊಂಟದ ಕೊಬ್ಬಿಗೆ ನಿಂಬೆ ಜ್ಯೂಸ್

ನಿಂಬೆಯಲ್ಲಿ ವಿಟಮಿನ್ ಸಿ ಸೇರಿದಂತೆ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ತನ್ಮೂಲಕ ನೀವು ಕೊಬ್ಬನ್ನು ಸುಡಬಹುದು, ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತನಾಳಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು.

VIEW ALL

Read Next Story