ಪೈಲ್ಸ್ ಸಮಸ್ಯೆಯಿಂದ ಪರಿಹಾರಕ್ಕಾಗಿ ನಿಮ್ಮ ಡಯಟ್ನಲ್ಲಿರಲಿ ಈ ಆಹಾರಗಳು

Yashaswini V
Mar 06,2024

ಮೂಲವ್ಯಾಧಿ

ಮೂಲವ್ಯಾಧಿಯನ್ನು ಫೈಲ್ಸ್ ಎಂತಲೂ ಕರೆಯಲಾಗುತ್ತದೆ. ಪೈಲ್ಸ್ ಸಮಸ್ಯೆ ಯಾರಿಗಾದರೂ ಯಾವಾಗ ಬೇಕಾದರೂ ಬರಬಹುದು.

ಮನೆಮದ್ದು

ಆದರೆ, ನಿಮ್ಮ ನಿಮ್ಮ ಆಹಾರ ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ಈ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಮೂಲವ್ಯಾಧಿ ಸಮಸ್ಯೆಯಿಂದ ಪರಿಹಾರಕ್ಕಾಗಿ ಕೆಲವು ಆಹಾರಗಳು ತುಂಬಾ ಪ್ರಯೋಜನಕಾರಿ ಆಗಿವೆ.

ಒಣ ಅಂಜೂರ

ಒಣ ಅಂಜೂರದ ಹಣ್ಣನ್ನು ಬಿಸಿ ನೀರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಸಮೇತ ಈ ಹಣ್ಣನ್ನು ತಿನ್ನುವುದರಿಂದ ಪೈಲ್ಸ್ ಸಮಸ್ಯೆಗೆ ತುಂಬಾ ಪ್ರಯೋಜನಕಾರಿ.

ಏಲಕ್ಕಿ

ಸ್ವಲ್ಪ ಎಲಕ್ಕಿಯನ್ನು ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಹುರಿಯಿರಿ. ಇದು ತಣ್ಣಗಾದ ಬಳಿಕ ಎಲಕ್ಕಿಯನ್ನು ಪುಡಿಮಾಡಿ ಒಂದು ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿ. ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ಬೆರೆಸಿ ಇದನ್ನು ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ನೆಲ್ಲಿಕಾಯಿ

ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸಣ್ಣ ಉಂಡೆ ತಯಾರಿಸಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಇದನ್ನು ಸೇವಿಸುವುದರಿಂದ ಪೈಲ್ಸ್ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.

ಹಸಿರು ತರಕಾರಿ

ನಿತ್ಯ ನಿಮ್ಮ ಆಹಾರದಲ್ಲಿ ಹಸಿರು ತರಕಾರಿಯನ್ನು ತಪ್ಪದೇ ಬಳಸಿ. ಇದರಿಂದ ಪೈಲ್ಸ್ ಸಮಸ್ಯೆಯಿಂದ ಸುಲಭ ಪರಿಹಾರವನ್ನು ಪಡೆಯಲು ಪ್ರಯೋಜನಕಾರಿ ಆಗಿದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story