ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಕಿಡ್ನಿ ಸಮಸ್ಯೆ ಎದುರಿಸುತ್ತಿದ್ದಾರೆ.
ಕೆಲವು ಲಕ್ಷಣಗಳು ಕಂಡುಬಂದರೆ ಪಕ್ಕಾ ನಿಮ್ಮ ಕಿಡ್ನಿಯಲ್ಲಿ ಏನೋ ಸಮಸ್ಯೆಯಾಗಿದೆ ಎಂದರ್ಥ.
ಹೆಚ್ಚಿನ ಪ್ರಮಾಣದ ನೀರು ಸೇವಿಸದೆಯೂ ಸತತವಾಗಿ ಮೂತ್ರ ವಿಸರ್ಜನಗೆ ಅವಸರವಾಗುವುದು.
ಮೂತ್ರ ವಿಸರ್ಜಿಸಿದ ಬಳಿಕ ಏನೋ ಕೊಳೆತಂತಹ ವಾಸನೆ ಬರುತ್ತಿರುವುದು.
ಬಹುತೇಕರು ವಿಶೇಷವಾಗಿ ಮಹಿಳೆಯರಿಗೆ ಮೂತ್ರ ವಿಸರ್ಜಿಸುವಾಗ ಉರಿ ಅಥವಾ ನೋವು ಬರುವುದು.
ಮೂತ್ರ ವಿಸರ್ಜಿಲು ಹೋದಾಗ ಕೆಲವು ಸಮಯ ಮೂತ್ರವೇ ಬರದಿರುವುದು.
ಬೆನ್ನುನೋವು, ಮೂತ್ರದಲ್ಲಿ ರಕ್ತ ಬರುವಿಕೆಯೂ ಕಿಡ್ನಿ ಸಮಸ್ಯೆಯಾಗಿರುತ್ತದೆ.
ಫ್ಲೂ ಅಂದರೆ ಒಂದು ರೀತಿಯ ಜ್ವರ ಬರುವುದು ಸಹ ಕಿಡ್ನಿ ಸಮಸ್ಯೆಯ ಲಕ್ಷಣವಾಗಿದೆ.