ಇಂದು ಅನೇಕರು ಮೂತ್ರಪಿಂಡ ವೈಫಲ್ಯ, ಮೂತ್ರಪಿಂಡದ ಕಲ್ಲುಗಳು ಹಾಗೂ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿರುತ್ತಾರೆ.
ವಿವಿಧ ಕಾರಣಗಳಿಂದ ಕಿಡ್ನಿಯ ಕಾರ್ಯ ಕ್ರಮೇಣ ಕಡಿಮೆಯಾಗಲಾರಂಭಿಸುತ್ತದೆ. ತಕ್ಷಣ ಚಿಕಿತ್ಸೆ ನೀಡದಿದ್ದರೆ ಕಿಡ್ನಿ ವೈಫಲ್ಯವಾಗುತ್ತದೆ.
ಮೂತ್ರಪಿಂಡದ ಕಾಯಿಲೆಯ ಆರಂಭಿಕ ಲಕ್ಷಣಗಳು ಕಂಡುಬರುವುದಿಲ್ಲ. ಹೀಗಾಗಿಯೇ ಇದನ್ನ ಸೈಲೆಂಟ್ ಕಿಲ್ಲರ್ ಎನ್ನುತ್ತಾರೆ.
ಆಯಾಸ, ಊತ, ಉಸಿರಾಟದ ತೊಂದರೆ, ವಾಕರಿಕೆ & ಮೂತ್ರದಲ್ಲಿ ರಕ್ತವು ಕಿಡ್ನಿ ವೈಫಲ್ಯದ ಪ್ರಮುಖ ಲಕ್ಷಣಗಳಾಗಿರುತ್ತವೆ.
ವಿಶೇಷವಾಗಿ ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಮೂತ್ರಪಿಂಡದ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ.
ಮೂತ್ರಪಿಂಡದ ತೊಂದರೆ ಮೂತ್ರನಾಳದ ಸೋಂಕು ಅಥವಾ ಉರಿಯೂತಕ್ಕೆ ಕಾರಣವಾಗಬಹುದು. ಇದು ಮೂತ್ರಪಿಂಡದ ಸೋಂಕು ಅಥವಾ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು.
ಮೂತ್ರಪಿಂಡ ಕಾಯಿಲೆ ಇರುವ ಜನರು ಎಷ್ಟು ಕಾಲ ಬದುಕುತ್ತಾರೆಂಬುದು ಯಾವ ರೀತಿಯ ಮೂತ್ರಪಿಂಡ ಕಾಯಿಲೆ ಇದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಕೆಲವು ರೋಗಿಗಳಿಗೆ ಡಯಾಲಿಸಿಸ್ ಮೂಲಕ ಜೀವಂತವಾಗಿಡಬಹುದು. ಇನ್ನೂ ಕೆಲವರಿಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.