ಆರೋಗ್ಯಕ್ಕೆ ವರದಾನ ಈ ಹಣ್ಣು! ವಾರಕ್ಕೊಂದು ತಿಂದರೇ ಬಿಪಿ-ಶುಗರ್ ಸಮಸ್ಯೆಯೇ ಇರಲ್ಲ..
ಹಲವಾರು ಹಣ್ಣುಗಳು ದೇಹಕ್ಕೆ ಬೇಕಾದ ಅಗತ್ಯ ಅಂಶಗಳನ್ನು ಹೆಚ್ಚಾಗಿಯೇ ಒಳಗೊಂಡಿರುತ್ತವೆ
ಆರೋಗ್ಯಕ್ಕೆ ಬೇಕಾದ ಮುಖ್ಯ ಹಣ್ಣುಗಳಲ್ಲಿ ಕಿವಿ ಕೂಡ ಒಂದು.. ಈ ಕಿವಿ ಹಣ್ಣು ಸ್ವಲ್ಪ ಕಾಸ್ಟ್ಲೀ ಆದರೂ, ಆರೋಗ್ಯಕ್ಕೆ ಬಹಳ ಒಳ್ಳೆಯದು
ಕಿವಿ ಹಣ್ಣಿನಿಂದ ಡೆಂಗ್ಯೂ ಜ್ವರ ವಾಸಿಯಾಗುತ್ತವೆ.. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಈ ಕಾಸ್ಟ್ಲೀ ಹಣ್ಣು ಹೃದಯಾಘಾತದಂತಹ ಕಾಯಿಲೆಗಳಿಂದ ದೂರವಿಡುತ್ತದೆ.. ಇದರ ಸೇವನೆ ಮೂಳೆಗಳನ್ನು ಬಲಪಡಿಸುತ್ತದೆ
ಕಿವಿಯಲ್ಲಿರುವ ವಿಟಮಿನ್ ಸಿ, ಪಾಲಿಫಿನಾಲ್‌ಗಳು ಮತ್ತು ಪೊಟ್ಯಾಸಿಯಮ್ ರಕ್ತದಲ್ಲಿನ ಕೊಬ್ಬು ಅಥವಾ ಟ್ರೈಗ್ಲಿಸರೈಡ್‌ಗಳ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ರಕ್ತನಾಳಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ
ಸುಂದರವಾಗಿ ಕಾಣುವ ಚರ್ಮಕ್ಕೆ ದೇಹದಲ್ಲಿ ಉತ್ತಮ pH ಸಮತೋಲನ ಅತ್ಯಗತ್ಯ.
ಕಿವಿ ಹಣ್ಣು ಕ್ಷಾರೀಯ ಸ್ವಭಾವವನ್ನು ಹೊಂದಿದ್ದು, ನಾವು ಸೇವಿಸುವ ಆಮ್ಲೀಯ ಆಹಾರಗಳ ಪರಿಣಾಮಗಳನ್ನು ಪ್ರತಿರೋಧಿಸಲು ಸಹಾಯ ಮಾಡುತ್ತದೆ.