ಹಲವಾರು ಔಷಧಿಯ ಗುಣ ಹೊಂದಿರುವ ಬೆಂಡೆಕಾಯಿ ಕ್ಯಾನ್ಸರ್ & ಹೃದ್ರೋಗದಂತಹ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.
30 ಕೆಲೊರಿಗಳಿರುವ ಪೌಷ್ಠಿಕ ತರಕಾರಿಯಾಗಿರುವ ಬೆಂಡೆಕಾಯಿಯಲ್ಲಿ 75 ಮಿಲಿಗ್ರಾಂ ಸಿ ಜೀವಸತ್ವವಿದೆ.
ಕರುಳಿನಲ್ಲಿ ಆಹಾರ ತಕ್ಷಣ ಜೀರ್ಣವಾಗಿ ಮಲಬದ್ಧತೆ ನಿವಾರಿಸಲು ಬೆಂಡೆಕಾಯಿ ಸಹಕಾರಿ.
ಬೆಂಡೆಕಾಯಿಯ ಕಷಾಯ ಸೇವನೆ ಉರಿಯೂತ, ಜ್ವರ, ತಲೆನೋವು, ಸಂಧಿವಾತ, ಅತಿಸಾರ ಶಮನಗೊಳಿಸುತ್ತದೆ.
ಕೆಮ್ಮು ಮತ್ತು ಗಂಟಲುನೋವಿಗೆ ಬೆಂಡೆ ರಸ ಸಿದ್ಧೌಷಧವೆನಿಸಿದೆ. ಇದು ಹೊಟ್ಟೆನೋವು, ಜ್ವರದ ಭೇದಿ ನಿವಾರಿಸುತ್ತದೆ.
ಬೆಂಡೆಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ಕಡಿಮೆ ಮಾಡುತ್ತದೆ.
ತೂಕ ನಿರ್ವಹಣೆಗೆ ಬೆಂಡೆಕಾಯಿ ಉತ್ತಮವಾಗಿದೆ. ಏಕೆಂದರೆ ಇದು ಪ್ರೋಟೀನ್ ಹೊಂದಿರುವ ತರಕಾರಿಯಾಗಿದೆ.
ವಿಟಮಿನ್ ಎ, ಸಿ, ಕೆ, ಮತ್ತು ಬಿ6 ಇವೆಲ್ಲವೂ ಬೆಂಡೆಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತವೆ.