ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಇದಕ್ಕೂ ಒಂದು ದಿನ ಮುಂಚಿತವಾಗಿ, ನರಕ ಚತುರ್ದಶಿ ಆಚರಿಸಲಾಗುತ್ತದೆ. ಈ ದಿನದಂದು ದೀಪವನ್ನು ಬೆಳಗಿಸುವುದು ವಿಶೇಷ ಮಹತ್ವವನ್ನು ಹೊಂದಿದೆ.
ನರಕ ಚತುರ್ದಶಿ ದಿನ ಸಂಜೆ ದೀಪ ಬೆಳಗಲಾಗುತ್ತದೆ. ಈ ದಿನ ಯಮ ರಾಜನನ್ನು ಪೂಜಿಸಲಾಗುತ್ತದೆ.
ನರಕ ಚತುರ್ದಶಿ ದಿನ ದೀಪ ಬೆಳಗಿಸಿ ಯಮರಾಜನನ್ನು ಪೂಜೆ ಮಾಡಿ ಕುಟುಂಬ ಸದಸ್ಯರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಈ ದಿನ 14 ದೀಪವನ್ನು ಬೆಳಗಬೇಕು. ಮನೆಯ ಪ್ರತಿ ಮೂಲೆಯಲ್ಲಿಯೂ ಈ ದಿನ ದೀಪ ಬೆಳಗಬೇಕು.
ಮೊದಲ ದೀಪವನ್ನು ಮನೆಯ ಮುಖ್ಯ ದ್ವಾರದ ಮುಂದೆ ಇಡಬೇಕು. ಎರಡನೇ ದೀಪವನ್ನು ದೇವರ ಮನೆಯಲ್ಲಿ ಇಡಬೇಕು, ಮೂರನೇ ದೀಪವನ್ನು ಲಕ್ಷ್ಮೀದೇವಿಯ ಮುಂದೆ ಇಡಬೇಕು.
ನಾಲ್ಕನೇ ದೀಪವನ್ನು ತುಳಸಿ ಕಟ್ಟೆಯ ಮುಂದೆ ಇಡಬೇಕು. ಐದನೇ ದೀಪವನ್ನು ಅಶ್ವಥ ಮರದ ಕೆಳಗೆ, ಆರನೇ ದೀಪವನ್ನ ಯಾರೂ ಇಲ್ಲದ ಸ್ಥಳದಲ್ಲಿ, ಏಳನೇ ದೀಪವನ್ನು ಕಸದ ಬುಟ್ಟಿಯ ಬಾಲಿ ಇಡಬೇಕು.
ಎಂಟನೇ ದೀಪವನ್ನು ಬಾತ್ ರೂಮ್ ನಲ್ಲಿ, ಒಂಭತ್ತನೇ ದೀಪವನ್ನು ಮನೆಯ ಚಾವಣೆಯಲ್ಲಿ , ಹತ್ತನೇ ದೀಪ ಅಡುಗೆ ಮನೆಯಲ್ಲಿ, ೧೧ನೆ ದೀಪ ಕಿಟಕಿ ಅಥವಾ ಬಾಲ್ಕನಿಯಲ್ಲಿ, 12 ನೇ ದೀಪ ಮೆಟ್ಟಿಲುಗಳ ಮೇಲೆ, 13 ನೇ ದೀಪವನ್ನು ನೀರು ಇಡುವ ಜಾಗದಲ್ಲಿ ಇಡಬೇಕು.
14 ನೇ ದೀಪವನ್ನು ರಾತ್ರಿ ಹೊತ್ತಿನಲ್ಲಿ ದಕ್ಷಿಣ ದಿಕ್ಕಿಗೆ ಕಸದ ರಾಶಿ ಬಳಿ ಇಡಬೇಕು.
ನರಕ ಚತುರ್ದಶಿ ದಿನ ಈ ರೀತಿ ದೀಪ ಹಚ್ಚುವುದರಿಂದ ಜೀವನದ ಎಲ್ಲಾ ಕಷ್ಟಗಳು ದೂರವಾಗುತ್ತವೆ.