.ಲಿಚಿಯಂತೆ ಕಾಣುವ ಈ ಹಣ್ಣು ರಾಮ್ ಬೂಟನ್. ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಂಡುಬರುವ ಈ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ.
ಈ ಹಣ್ಣಿನ ಸಿಪ್ಪೆಯಲ್ಲಿ ಫೆನೋಲಿಕ್ ಹೆಸರಿನ ಅಂಶ ಅಡಗಿದೆ ಇದು ಮೂಳೆಗಳ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.
ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಕ್ಯಾನ್ಸರ್ ಕೋಶಗಳು ಬೆಳೆಯುವುದನ್ನು ತಡೆಯುತ್ತದೆ.
ಈ ಹಣ್ಣಿನಲ್ಲಿರುವ ಕ್ಯಾಲೋರಿ, ಕಾರ್ಬೋಹೈಡ್ರೆಟ್ ಗಳು ದೇಹದಲ್ಲಿ ಗ್ಲುಕೋಸ್ ಅನ್ನು ಉಂಟು ಮಾಡುತ್ತದೆ. ಇದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಹಣ್ಣನ್ನು ಬಳಸಬಹುದು.
ಮಲಬದ್ದತೆ ನಿವಾರಿಸಲು ಈ ಹಣ್ಣು ಸಹಾಯ ಮಾಡುತ್ತದೆ. ಇದು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿ ಇಡುತ್ತದೆ.
ಇದು ಲೈಂಗಿಕ ಹಾರ್ಮೋನ್ ಗಳನ್ನೂ ಹೆಚ್ಚಿಸಲು ಪುರುಷರಿಗೆ ಸಹಾಯ ಮಾಡುತ್ತದೆ.
ಮಧುಮೇಹದ ವಿರುದ್ದ ಹೋರಾಡುವ ಗುಣಗಳು ಈ ಹಣ್ಣಿನ ಸಿಪ್ಪೆಯಲ್ಲಿ ಅಡಗಿವೆ.
ನೀವು ಕೂಡಾ ಈ ಎಲ್ಲಾ ಸಮಸ್ಯೆಗಳಿಂದ ಬಳಲುತ್ತಿದ್ದರೆ ಈ ಹಣ್ಣನ್ನು ಟ್ರೈ ಮಾಡಿ.